ಬೆಂ.ಪೂ.ಪತ್ರಕರ್ತರ ಭವನಕ್ಕೆ ಜಾಗ ಗುರುತು

ಬೆಂ.ಪೂ.ಪತ್ರಕರ್ತರ ಭವನಕ್ಕೆ ಜಾಗ ಗುರುತು

ಕೆ.ಆರ್.ಪುರ, ಜ. 27: ಬೆಂಗಳೂರು ಪೂರ್ವ ತಾಲ್ಲೂಕು ಪತ್ರಕರ್ತರ ಭವನಕ್ಕೆ ಜಾಗ ಗುರುತಿಸಲಾಗಿದ್ದು, ಶೀಘ್ರವೇ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಬೈರತಿ ಬಸವರಾಜ ಇಂದಿಲ್ಲಿ ತಿಳಿಸಿದರು.

ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 71 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಭಾರತದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯ ಬದುಕು ನಡೆಸುವಂತಾಗಿದೆ ಎಂದು ಹೇಳಿದರು.

ಕೆಆರ್ ಪುರ ಕ್ಷೇತ್ರದ ಅಭಿವೃದ್ಧಿಗಾಗಿ  ಯಡಿಯೂರಪ್ಪ ನವರ ಸರ್ಕಾರ 625 ಕೋಟಿ ನೀಡಿದ್ದು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು. ಬಡವರಿಗೆ ಸೂರು ನೀಡುವ ಉದ್ದೇಶದಿಂದ ಜ.28 ರಂದು ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಜ.30 ರಂದು ಕೆಆರ್ ಪುರ ನೂತನ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಕ್ವಾಟ್ರಸ್ ಗಳನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ತೇಜಸ್ ಕುಮಾರ್ ಮಾತನಾಡಿ, ಪೂರ್ವ ತಾಲೂಕಿನ ಪತ್ರಕರ್ತರಿಗೆ ಪತ್ರಕರ್ತರ ಭವನ, ಸರ್ಕಾರಿ ನೌಕರರಿಗೆ, ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ ಎಂದರು.

ಬೆಂಗಳೂರು ನಗರವನ್ನು ಮಾಲೀನ್ಯ ಮುಕ್ತ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು. ಕಸವನ್ನು ಬೇರ್ಪಡಿಸಿ ಬಿಬಿಎಂಪಿಗೆ ನೀಡುವ ಮೂಲಕ ಉತ್ತಮ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ, ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಿದ್ದು ಎಲ್ಲರೂ ಬಟ್ಟೆ ಬ್ಯಾಗ್ ಬಳಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದ್ದು, ನೀರನ್ನು ಮಿತವಾಗಿ ಬಳಸುವಂತೆ ಕೋರಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.  ಕೆ.ಆರ್.ಪುರದ ಹತ್ತಾರು ಶಾಲೆಗಳಿಂದ ನೂರಾರು ಮಕ್ಕಳಿಂದ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಆಕರ್ಷಕ ಪ್ರದರ್ಶನ ನೀಡಿದ್ದು, ನೋಡುಗರ ಗಮನ ಸೆಳೆಯಿತು.

ಈ ಕಾರ್ಯಕ್ರಮದಲ್ಲಿ ಮಹದೇವಪುರ ಜಂಟಿ ಆಯುಕ್ತರು ವೆಂಕಟಾ ಚಲಪತಿ, ಶಿಕ್ಷಣ ಅಧಿಕಾರಿ ಹನುಮಂತರಾಯಪ್ಪ, ಇ.ಒ. ಮಂಜುನಾಥ್, ಟಿ.ಹೆಚ್.ಒ ಚಂದ್ರಶೇಖರ್, ಇನ್ಸ್ ಪೆಕ್ಟರ್ ಅಂಬರೀಶ್, ಪಾಲಿಕೆ ಸದಸ್ಯ ಶ್ರೀಕಾಂತ್, ಮಾಜಿ ಸದಸ್ಯರಾದ ಮಂಜುಳಾದೇವಿ,  ಆಂತೋಣಿಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಭಾಗ್ಯಮ ಸತೀಶ್, ಮುಖಂಡರಾದ ಎಲ್.ಐ.ಸಿ ವೆಂಕಟೇಶ್, ಕೆ.ಪಿ.ಕೃಷ್ಣ, ಚನ್ನಕೇಶವ, ಶಿವಪ್ಪ, ಮತ್ತಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos