ಮಹಾಲಕ್ಷ್ಮೀ ಪೂಜೆಯ ಸರಳ ವಿಧಾನ ಪಾಲಿಸಿ

ಬೆಂಗಳೂರು, ಆ. 10: ಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿಲ್ಲವೇ ಚಿಂತಿಸ ಬೇಡಿ.. ಕರ್ನಾಟಕ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಕ್ತಿ ಭಾವಗಳಿಂದ ವರಮಹಾ ಲಕ್ಷ್ಮೀ ವ್ರತ ಆಚರಣೆ ಮಾಡಲಾಗಿದೆ. ಹಬ್ಬ ಆಚರಣೆ ಮಾಡಲು ಸಾದ್ಯವಾಗದಿರುವವರಿಗೆ ಲಕ್ಷ್ಮೀ ಕಟಾಕ್ಷ ಪಡೆಯಲು ಸರಳ ವಿಧಾನ ನೋಡಿ ಪಾಲಿಸಿ ಲಕ್ಷ್ಮೀ ಕೃಪೆಗೆ ಪಾತ್ರರಾಗಿ. ಸಂಪನ್ನಳು ಕೇಳಿದ ವರ ನೀಡೊ ಆಧಿ ದೇವತೆ, ಕರುಣಾಮಯಿ ಲಕ್ಷ್ಮೀ ದೇವಿಗೆ ಮಂಗಳವಾರ, ಶುಕ್ರವಾರ ಶುಭದಿನಗಳು. ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಹಣ, ಆಭರಣ, ಸಂಪತ್ತು ಆಹಾರ ,ಆರೋಗ್ಯ, ಸಂತಾನ, ಧೀರ್ಘ ಸುಮಂಗಲಿ ಭಾಗ್ಯ ನೀಡೆಂದು ಬೇಡುತ್ತಾರೆ.

ಆಫೀಸು, ಕಛೇರಿ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸದ ಒತ್ತಡದಲ್ಲಿರುವವರು ನಿಯಮಾನುಸಾರವಾಗಿ ಮಹಾಲಕ್ಷ್ಮಿ ವ್ರತ ಮಾಡಲು ಸಾದ್ಯವಾಗಿರುವುದಿಲ್ಲ. ಶ್ರಾವಣ ಮಾಸದ 2ನೇ ಶುಕ್ರವಾರ ಆಚರಣೆ ಮಾಡುವ ವರಮಹಾಲಕ್ಷ್ಮೀ ವ್ರತದಂದು, ಭಾಗ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳಲು ಸಂಭ್ರಮ ಸಡಗರ ಇರುತ್ತದೆ. ಅಂದು ವ್ರತ ಮಾಡಲು ಸಾದ್ಯವಾಗದೇ ಇದ್ದವರು ಪ್ರತಿ ಮಂಗಳವಾರ, ಶುಕ್ರವಾರ ಪೂಜೆ ಕೈಗೊಳ್ಳಬಹುದು.

ಮುಂಜಾನೆ ಎದ್ದು, ಮಂಗಳ ಸ್ನಾನ ಮಾಡಿ, ಪೂಜಾ ಸ್ಥಳ ಶುಚಿ ಮಾಡಿ ಬಾಳೆಕಂದು,ಮಾವಿನೆಲೆಯ ತೋರಣಗಳಿಂದ ಅಲಂಕೃತಗೊಳಿಸಿ ಅಷ್ಟದಳ ರಂಗೋಲಿ ಹಾಕಿ ತಾಮ್ರ ಹಿತ್ತಾಳೆ ಅಥವಾ ಬೆಳ್ಳಿ ಕಲಶದಲ್ಲಿ ಅಕ್ಕಿ ತುಂಬಿಸಿ ಜೊತೆಯಲ್ಲಿ ಅರಿಶಿಣದ ಕೊಂಬು, ಎಲೆ ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಸವರಿದ ತೆಂಗಿನ ಕಾಯಿಗೆ ಲಕ್ಷ್ಮೀ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ  ತೆಂಗಿನ ಕಾಯಿಗೆ ಜೋಡಿಸಬೇಕು.

ಲಕ್ಷ್ಮೀ ದೇವಿಗೆ ಕೆಲವು ನೋಟುಗಳಿಂದ ಹಾರ ಮಾಡಿ ಅಲಂಕರಿಸುತ್ತಾರೆ. ಪೂಜೆ ಪ್ರಾರಂಭದಲ್ಲಿ ಗಣೇಶನನ್ನು ಪಠಿಸಬೇಕು .ನಂತರ ಲಕ್ಷ್ಮೀ ಪೂಜೆ ಕೈಗೊಂಡು ಲಕ್ಷ್ಮೀ ಅಷ್ಟೊತ್ತರ ಅಥವಾ ಲಕ್ಷ್ಮೀ ಸಹಸ್ರನಾಮ ಪಠಿಸಿ, ತಮ್ಮ ಸಂಪ್ರದಾಯದಂತೆ ನೈವೇದ್ಯ ಅರ್ಪಿಸಿ, ಸಿಹಿ ಮತ್ತು ತಾಂಬೂಲ ಸಮರ್ಪಿಸಬೇಕು.

ನಮೋಸ್ತುಸ್ತೆ ಮಹಾ ಮಾಯೇ ಎಂದು ಪಠಿಸಬೇಕು

ಓಂ ಶ್ರೀ ಶ್ರೇಯ ನಮ: ಎಂಬುದಾಗಿ ನೂರೆಂಟು ಭಾರ ಪಠಿಸಬಹುದು, ಎಇಹಿ ನೈವೇದ್ಯ ಹಾಗೂ ತಾಂಬೂಲ ಅರ್ಪಿಸಲು ಮರೆಯದಿರಿ.ನಂತರ ರಕ್ಷಾ ದಾರವನ್ನು ಬಲಗೈಗೆ ಕಟ್ಟಿಕೊಳ್ಳಿ. ಶೀಘ್ರದಲ್ಲೇ ಲಕ್ಷ್ಮೀ ಕಟಾಕ್ಷ ಲಭಿಸುವುದು ಎಂದು ಪುರಾಣಗಳಿಂದ ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos