ಚುನಾವಣೆಗೆ 11 ಸಾವಿರ ಕೆಎಸ್ಆರ್ಟಿಸಿ ಬಸ್ ನಿಯೋಜನೆ

ಚುನಾವಣೆಗೆ 11 ಸಾವಿರ ಕೆಎಸ್ಆರ್ಟಿಸಿ ಬಸ್ ನಿಯೋಜನೆ

ಬೆಂಗಳೂರು, ಮಾ.22, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 11 ಸಾವಿರ ಕೆಎಸ್‌ಆರ್‌ಟಿಸಿ ಬಸ್‌ ಬಳಕೆ ಮಾಡಲಾಗುತ್ತದೆ ಎಂದು ನಿಗಮ ತಿಳಿಸಿದೆ.

ಹಾಗಾಗಿ ಏ.16,17ರಂದು ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕೆಎಸ್‌ಆರ್‌ಟಿಸಿಯ 3ರಿಂದ 4 ಸಾವಿರ ಬಸ್‌ಗಳು ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಳ್ಳಲಿವೆ. ಆದ್ದರಿಂದ ಏ.17 ಮತ್ತು 19ರಂದು ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ದೂರದ ಊರಿಗೆ ಪ್ರಯಾಣಿಸುವ ಜನರಿಗೆ ಬಸ್ ವ್ಯತ್ಯಯ ಉಂಟಾಗಲಿದೆ.

ಏ.18ರಂದು ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಹಾಸನ, ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಗೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಆಗದಿದ್ದರೂ ಕರಾವಳಿ ಹಾಗೂ ಚಿತ್ರದುರ್ಗ ಕಡೆಗೆ ಪ್ರಯಾಣಿಸುವ ಜನರಿಗೆ ತೊಂದರೆಯಾಗಬಹುದು.

ಏ.18ರಂದು ಇತರೆ ನಿಗಮಗಳಿಂದ ಕೆಎಸ್‌ಆರ್‌ಟಿಸಿ ಕಾರ್ಯಾಚರಣೆ ನಡೆಸುವ ಜಿಲ್ಲೆಗೆ ಹೆಚ್ಚಿನ ಬಸ್‌ ಕಾರ್ಯಾಚರಣೆ ಮಾಡಲಿವೆ. ಏ.23ರಂದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿಯ ಹೆಚ್ಚಿನ ಬಸ್ ಬಳಕೆ ಆಗಲಿವೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಎಂಡಿ ಶಿವಯೋಇ ಕಳಸದ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos