ಕೋಲ್ಕತ್ತಾ, ಅ.11 : ಫೇಸ್ಬುಕ್ನಲ್ಲಿ ಸ್ನೇಹಿತರಾದ ಯುವಕ, ಯುವತಿ ಭೇಟಿಯಾಗಿ ಕೆಲವೇ ಗಂಟೆಗಳಲ್ಲಿ ಮದುವೆಯಾದ ಸಂಗತಿಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಸುದೀಪ್ ಘೋಷಲ್,ಪ್ರತಿಮಾ ಬ್ಯಾನರ್ಜಿ ಮದುವೆಯಾದ ಜೋಡಿ. ಇಬ್ಬರು ಮೂರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಸ್ನೇಹಿತರಾಗಿದ್ದರು. ಪ್ರತಿಮಾ ಅಷ್ಟಮಿ ದಿನ ತನ್ನ ಸ್ನೇಹಿತರನ್ನು ಭೇಟಿ ಆಗಲು ಕೋಲ್ಕತ್ತಾಗೆ ಬರಲಿದ್ದಾರೆ ಎಂಬ ವಿಷಯ ಸುದೀಪ್ಗೆ ಫೇಸ್ಬುಕ್ ಮೂಲಕ ತಿಳಿಯಿತು. ಈ ವೇಳೆ ಇಬ್ಬರು ಭೇಟಿ ಆಗಲು ನಿರ್ಧರಿಸಿದ್ದರು. ಬೆಳಗ್ಗೆ ಮೊದಲ ಬಾರಿ ಭೇಟಿಯಾದ ನಂತರ ಸಂಜೆ 8 ಗಂಟೆಗೆ ಮತ್ತೆ ಸುದೀಪ್ ಹಾಗೂ ಪ್ರತಿಮಾ ಭೇಟಿ ಆಗಿದ್ದಾರೆ. ಈ ವೇಳೆ ಸುದೀಪ್ ಮಂಡಿಯೂರಿ ಪ್ರತಿಮಾಗೆ ಪ್ರಪೋಸ್ ಮಾಡಿದ್ದಾರೆ. ಬಳಿಕ ಸಾವಿರಾರು ಜನರ ನಡುವೆ ಇವರಿಬ್ಬರ ಮದುವೆ ಆಗಿದೆ.