ಶಾಸಕ ಕೃಷ್ಣಪ್ಪ ಸಂಬಂಧಿ ಸಿನಿಮಾಗೆ ಆರ್ಯನ್ ಎಂಟ್ರಿ!

ಶಾಸಕ  ಕೃಷ್ಣಪ್ಪ ಸಂಬಂಧಿ ಸಿನಿಮಾಗೆ ಆರ್ಯನ್ ಎಂಟ್ರಿ!

ಬೆಂಗಳೂರು : ಜೂನ್.5, ನ್ಯೂಸ್ ಎಕ್ಸ್ ಪ್ರೆಸ್ : ಯುವ ಪ್ರತಿಭೆ ಬೆಳ್ಳಿತೆರೆಗೆ ಹೀರೋ ಎಂಟ್ರಿ ಆಗುತ್ತಿದ್ದಾರೆ. ಹೆಸರು ಆರ್ಯನ್. ಮಾಜಿ ಸಚಿವ ಹಾಗೂ ಶಾಸಕ ಲೇಔಟ್ ಕೃಷ್ಣಪ್ಪ ಅವರ ದೂರದ ಸಂಬಂಧಿ. ಎಂಬಿಎ ವಿದ್ಯಾಭ್ಯಾಸದ ನಂತರ ಭಗವಾನ್ ಆ್ಯಕ್ಟಿಂಗ್ ತರಬೇತಿ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದು ನಟನಾಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ‘ಆ್ಯಕ್ಟಿಂಗ್ ಮೇಲೆ ಆಸೆ ಇತ್ತು. ಎಂಬಿಎ ಮುಗಿದ ತಕ್ಷಣ ಆ್ಯಕ್ಟಿಂಗ್ ತರಬೇತಿಗೆ ಸೇರಿದ್ದೆ. ಭಗವಾನ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದಷ್ಟು ತರಬೇತಿ ಪಡೆದ ನಂತರ ಅವಕಾಶಗಳತ್ತ ಎದುರು ನೋಡುತ್ತಿದ್ದಾಗ ನಿರ್ದೇಶಕ ದರ್ಶಿತ್ ಸರ್ ಸಿಕ್ಕರು. ಅವರ ಮೂಲಕ ಸಿಕ್ಕ ಅವಕಾಶವಿದು’ ಎನ್ನುತ್ತಾರೆ ಆರ್ಯನ್. ಮಧುಮಗಳು, ದೊಡ್ಮನೆ ಸೊಸೆ ಧಾರಾವಾಹಿಗಳನ್ನು ನಿರ್ದೇಶಿಸಿರುವ ದರ್ಶಿತ್ ನಿರ್ದೇಶನದ ಚಿತ್ರವಿದು. ಆರ್ಯಗೆ ಇಲ್ಲಿ ನಾಯಕಿ ಆಗಿ ಅದ್ವಿತಿ ಶೆಟ್ಟಿ ಜೋಡಿ.

ಫ್ರೆಶ್ ನ್ಯೂಸ್

Latest Posts

Featured Videos