ಮಂಡ್ಯ, ಡಿ. 22: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ಗರಿಷ್ಠ 124.80 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿರುವ ಡ್ಯಾಂ ಈಗಲೂ 121.77 ಅಡಿ ನೀರಿನ ಮಟ್ಟ ಸಂಗ್ರಹವಾಗಿದೆ. ಡ್ಯಾಂಗೆ 3388 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 4118 ಕ್ಯೂಸೆಕ್ ಹೊರ ಹರಿವಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಇಂದು 121.77 ಅಡಿ ನೀರು ಸಂಗ್ರಹವಾಗಿದೆ. ನಾಲ್ಕು ತಿಂಗಳುಗಳ ಕಾಲ ನಿರಂತರವಾಗಿ ಇಷ್ಟೊಂದು ಪ್ರಮಾಣದ ನೀರು ಸಂಗ್ರಹವಾಗಿರುವುದು ಡ್ಯಾಂನ ಇತಿಹಾಸದಲ್ಲೇ ಮೊದಲಾಗಿದೆ.
ಡ್ಯಾಂನಲ್ಲಿ ಎಲ್ಲಿ ನೋಡಿದರೂ ನೀರು ತುಂಬಿ ತುಳುಕಲಾರಂಭಿಸಿದೆ. ಕಳೆದ ಆಗಸ್ಟ್ ನಲ್ಲಿ ಡ್ಯಾಂನ ನೀರಿನ ಮಟ್ಟ ಕೇವಲ 100 ಅಡಿಯಷ್ಟಿತ್ತು. ಹಿಂದೆ ಡ್ಯಾಂ ಭರ್ತಿಯಾಗುವುದೇ ಅನುಮಾನ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆಗಸ್ಟ್ 15ರ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು. ಈ ಮೂಲಕ ಅಧಿಕ ದಿನಗಳಲ್ಲಿ ಭರ್ತಿಯಾಗುವ ಮೂಲಕ ದಾಖಲೆ ನಿರ್ಮಿಸಿದೆ.