ಕೆಆರ್ಎಸ್ ಬೃಂದಾವನದಲ್ಲಿ ಹೆಬ್ಬಾವು ಪ್ರತ್ಯಕ್ಷ

ಕೆಆರ್ಎಸ್ ಬೃಂದಾವನದಲ್ಲಿ ಹೆಬ್ಬಾವು ಪ್ರತ್ಯಕ್ಷ

ಮಂಡ್ಯ, ಜು. 24 : ಆಹಾರ ಅರಸಿ ಬೃಂದಾವನಕ್ಕೆ ಬಂದಿದ್ದ ಹೆಬ್ಬಾವನ್ನು ರಕ್ಷಿಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ನಡೆದಿದೆ. ಹೆಬ್ಬಾವು ಬೃಂದಾವನದ ಕಾವೇರಿ ಪ್ರತಿಮೆ ಬಳಿಗೆ ಆಹಾರ ಹರಿಸಿ ಬಂದಿತ್ತು. ಈ ವೇಳೆ ಕರ್ತವ್ಯ ನಿರತ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ 10 ಅಡಿ ಉದ್ದದ ಹೆಬ್ಬಾವನ್ನು ನೋಡಿದ್ದಾರೆ.
ಸಿಬ್ಬಂದಿ ಹೆಬ್ಬಾವನ್ನು ನೋಡಿದ ತಕ್ಷಣ ಗ್ರಾಮ ಪಂಚಾಯ್ತಿ ಸದಸ್ಯ ಸ್ನೇಕ್ ದೀಪು ಅವರಿಗೆ ಕರೆ ಮಾಡಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ದೀಪು ಹೆಬ್ಬಾವನ್ನು ರಕ್ಷಿಸಿದ್ದಾರೆ. ಕೆಆರ್ಎಸ್ ಬೃಂದಾವನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ನಾನು 4,500 ಹಾವುಗಳನ್ನು ರಕ್ಷಿಸಿದ್ದೇನೆ. ಮಂಗಳವಾರ ರಾತ್ರಿ ಸುಮಾರು 12 ಗಂಟೆಗೆ ಭಾರೀ ಗಾತ್ರದ ಹೆಬ್ಬಾವು ಸಿಕ್ಕಿದೆ. ನಾನು ಹಾಗೂ ನನ್ನ ಸ್ನೇಹಿತರು ಈ ಹೆಬ್ಬಾವನ್ನು ಅರಣ್ಯಕ್ಕೆ ಬಿಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಸ್ನೇಕ್ ದೀಪು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos