ಕೊಲೆಗೆ ದಾರಿಯಾಯಿತು: ಮದುವೆ ಸಂಭ್ರಮ

ಕೊಲೆಗೆ ದಾರಿಯಾಯಿತು: ಮದುವೆ ಸಂಭ್ರಮ

ಮದುವೆಯ ಮನೆ ಎಂದರೆ ಸಂಭ್ರಮ-ಸಡಗರ ಇದ್ದೆ ಇರುತ್ತೆ. ಆದರೆ ಆ ಸಂಭ್ರಮ ಕೊಲೆಗೆ
ನಾಂದಿಹಾಡಿತು. ಮದುವುಗೆ ಟೈಮ್ ಆಗುತ್ತಿದೆ  ಡ್ಯಾನ್ಸ್ ಬೇಡ ಎಂದಿದಕ್ಕೆ ವರನ ಕಡೆಯವರು ವಧುವಿನ ಸಂಬಂಧಿಕನ ಮೇಲೆ ಚಾಕು ಇರಿದ ಘಟನೆ ಶುಕ್ರವಾರ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

ವಿಕಾಸ್ ಕೊಲೆಯಾದ ವ್ಯಕ್ತಿ. ವರನನ್ನು ಮದುವೆಗೆ ಕರೆದುಕೊಂಡು ಬರುವಾಗ ರಸ್ತೆ ಉದ್ದಕ್ಕೂ ನೃತ್ಯ ಸಂಪ್ರದಾಯವಿದೆ. ಗುರುವಾರ ರಾತ್ರಿ ವರನ ಕಡೆಯವರು ಮದುವೆ ಮಂಟಪಕ್ಕೆ ಡ್ಯಾನ್ಸ್ ಮಾಡುತ್ತಲೇ
ಬಂದಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಡ್ಯಾನ್ಸ್ ಮಾಡುತ್ತಲೇ ಇದ್ದರಂತೆ.


ಸಮಯದಲ್ಲಿ ಮದುವೆಗೆ ತಡವಾಗುತ್ತಿದೆ. ಹೀಗಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದು ವಧುವಿನ ಕಡೆಯವರಾದ ವಿಕಾಸ್ ವರನ ಸಂಬಂಧಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿಕಾಸ್ ಮನವಿ ಮಾಡಿಕೊಂಡರು ಸ್ಪಂದಿಸದೇ ವರನ ಕಡೆಯವರು ಡ್ಯಾನ್ಸ್ ಮಾಡುವುದನ್ನು ಮುಂದುವರೆಸಿದರು.

ವಿಕಾಸ್ ಡ್ಯಾನ್ಸ್ ಬೇಡವೆಂದು ಹೇಳಿದಕ್ಕೆ ವರ ಹಾಗೂ ವಧುವಿನ ಕುಟುಂಬಸ್ಥರ ನಡುವೆ ಜಗಳ ನಡೆದು, ಜಗಳ ವಿಕೋಪಕ್ಕೆ ತಿರುಗಿದಾಗ ವರನ ಸಂಬಂಧಿಕ ಸಂಜಯ್,ಎನ್ನುವ ವ್ಯಕ್ತಿ ವಿಕಾಸ್‍ಗೆ ಚಾಕುಯಿಂದ ಇರಿದಿದ್ದಾನೆ. ಪರಿಣಾಮ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಆರೋಪಿ ಸಂಜಯ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos