ನವದೆಹಲಿ, ಸೆ. 6 : ಕ್ರಿಕೆಟಿಗ ವಿರಾಟ್ ಕೊಹ್ಲಿ ಅರೆಬೆತ್ತಲೆ ಚಿತ್ರವೊಂದು ಟ್ರೋಲ್ಗೆ ಒಳಗಾಗಿದೆ. ಶರ್ಟ್ ಇರದ ಫೋಟೋವೊಂದನ್ನು ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಟ್ರಾಫಿಕ್ ಫೈನ್ ಕಟ್ಟಿದ ಬಳಿಕ ನಂ.1 ಕ್ರಿಕೆಟಿಗ’, ‘ಬಹುಶಃ ನೀವು ಟ್ರಾಫಿಕ್ ಚಲನ್ ಕಟ್ಟಿರಬೇಕು’ ಎಂಬುದಾಗಿ ಟ್ರಾಫಿಕ್ ಫೈನ್ಗೆ ಸಂಬಂಧಿಸಿಯೇ ಹೆಚ್ಚು ಜನ ತಮಾಷೆ ಮಾಡಿದ್ದಾರೆ. ಇತ್ತೀಚೆಗೆ ರಸ್ತೆ ನಿಯಮ ಉಲ್ಲಂಘನೆಗೆ ಹಲವೆಡೆ ವಿಧಿಸಲಾಗುತ್ತಿರುವ ದುಬಾರಿ ದಂಡವನ್ನು ಸಾರ್ವಜನಿಕರು ಪರೋಕ್ಷವಾಗಿ ಟೀಕಿಸಿದ್ದಾರೆ.