ಬೆಂಗಳೂರು: ಇಂದು ಕರುನಾಡ ಚಕ್ರವರ್ತಿ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದಂದು ಅಭಿಮಾನಿಗಳು ದೇಶದಾದ್ಯಂತ ಬಂದು ಇವರನ್ನು ನೋಡಿ ಹಾಗೂ ವಿಶ್ ಮಾಡಲು ಅನೇಕ ಕಡೆಯಿಂದ ಬರುತ್ತಾರೆ. ಇವರು ಭಾರತದ್ಯಾದಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ದೊಡ್ಡ ಸಂಭ್ರಮಾಚರಣೆ ಆಗಿದೆ ಹಾಗೂ ಕರ್ನಾಟಕದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಕಿಚ್ಚ ಸುದೀಪ್ ಗೆ ಇಂದು ಬರ್ತ್ ಡೇ ಸಂಭ್ರಮ. ಎಲ್ಲ ಕಡೆಗಳಿಂದ ಅವರಿಗೆ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀರೋಗೆ ವಿಶ್ ಮಾಡಲಾಗುತ್ತಿದೆ. ಇದರ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಘೋಷಣೆ ಮಾಡಲಾಗುತ್ತಿದೆ. ‘ಕಿಚ್ಚ 46’ ಸಿನಿಮಾದ ಟೈಟಲ್ ಕೂಡ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮ್ಯಾಕ್ಸ್’ ಎಂದು ಶೀರ್ಷಿಕೆ ನೀಡಲಾಗಿದೆ. ಶೀರ್ಷಿಕೆ ಟೀಸರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಈ ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದೆ.
‘ಮ್ಯಾಕ್ಸ್’ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾದ ಟೈಟಲ್ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ‘ಸಾಕಷ್ಟು ವಾಹನಗಳಲ್ಲಿ ವೆಪನ್ ತೆಗೆದುಕೊಂಡು ಬರಲಾಗುತ್ತಿದೆ’ ಎಂದು ಪೊಲೀಸರಿಗೆ ಮಾಹಿತಿ ಬರುತ್ತದೆ. ಆದರೆ, ಇದಕ್ಕೆ ಪೊಲೀಸರು ಹೆದರಲ್ಲ. ಏಕೆಂದರೆ ಅವರ ಬಳಿ ಮ್ಯಾಕ್ಸ್ ಇದ್ದಾನೆ. ‘ಬರುವವರು ಜ್ವಾಲಾಮುಖಿಯಿಂದ, ಚಂಡಮಾರುತದಿಂದ, ಭೂಕಂಪದಿಂದ, ಸುನಾಮಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ರ ಸಿಕ್ಕಿಬಿದ್ದರೆ ಸಾವೇ ಇಲ್ಲ ಎಂದು ವರ ಪಡೆದು ಹುಟ್ಟಿದವನಿಗೂ ಸಾವು ಗ್ಯಾರಂಟಿ’ ಎನ್ನುತ್ತಾರೆ ಪೊಲೀಸರು.
ಬಳಿಕ ಲಾಟಿ ಹಿಡಿದು ಬರುತ್ತಾರೆ ಸುದೀಪ್. ಈ ಮೂಲಕ ಸುದೀಪ್ ಪೊಲೀಸ್ ಪಾತ್ರದ ಮೂಲಕ ತೆರೆಮೇಲೆ ಬರುವ ಸೂಚನೆ ನೀಡಿದ್ದಾರೆ. ಸುದೀಪ್ ಅವರಿಗೆ ಪೊಲೀಸ್ ಪಾತ್ರ ಚೆನ್ನಾಗಿ ಹೊಂದುತ್ತದೆ. ‘ಕೆಂಪೇಗೌಡ’, ‘ವರದನಾಯಕ’, ‘ಕಬ್ಜ’ ಸಿನಿಮಾಗಳಲ್ಲಿ ಸುದೀಪ್ ಅವರು ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಮ್ಯಾಕ್ಸ್’ ಚಿತ್ರಕ್ಕಾಗಿ ಮತ್ತೆ ಖಾಕಿ ತೊಡುತ್ತಿದ್ದಾರೆ