ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ : ಆರ್ ಜೆ ಡಿ ಭರವಸೆ

ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ : ಆರ್ ಜೆ ಡಿ ಭರವಸೆ

ಪಾಟ್ನಾ, ಏ. 8, ನ್ಯೂಸ್ ಎಕ್ಸ್ ಪ್ರೆಸ್: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಇಂದು ಲೋಕಸಭೆ ಚುನಾವಣೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ ನಿವಾರಣೆ, ಸಾಮಾಜಿಕ ನ್ಯಾಯ, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿ ಮುಂತಾದಾ ಭರವಸೆಗಳನ್ನು ಪ್ರಣಾಳಿಕೆ ಹೊಂದಿದೆ.

ಬಿಹಾರದಲ್ಲಿ ಪ್ರಮುಖವಾಗಿ ಎಲ್ಲಾ ವಲಯಗಳಲ್ಲೂ ಉದ್ಯೋಗ ಸೃಷ್ಟಿಸಿ, ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯುತ್ತೇವೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ನ ಕನಿಷ್ಠ ಆದಾಯ ಭರವಸೆ ಯೋಜನೆಗೆ ಆರ್ ಜೆಡಿ ಬೆಂಬಲ ನೀಡಿದೆ. ಹಿಂದುಳಿದ ವರ್ಗಗಳ ಮಂಡಲ್ ಆಯೋಗ ಮಂಡಲ್ ಕಮಿಷನ್ ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ದಲಿತರು, ಹಿಂದುಳಿದ ಜನರಿಗೆ ಮೀಸಲಾತಿ, ಬಡ್ತಿ ಮೀಸಲಾತಿ ನೀಡಲಾಗುತ್ತದೆ. ಖಾಸಗಿ ವಲಯದ ಉದ್ಯೋಗಗಳಲ್ಲೂ ದಲಿತ, ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೋಟಾ ಒದಗಿಸಲಾಗುವುದು ಎಂದರು.

200 ಹುದ್ದೆಯಲ್ಲಿ ರೋಸ್ಟರ್ ಪದ್ಧತಿಯನ್ನು (99 ಹುದ್ದೆಗಳು ಎಸ್ಸಿ, ಎಸ್ಟಿ, ಒಬಿಸಿ ವರ್ಗದವರಿಗೆ ಮೀಸಲು, 101 ಹುದ್ದೆಗಳಿಗೆ ಮೀಸಲಾತಿ ಇಲ್ಲ) ಮತ್ತೊಮ್ಮೆ ಜಾರಿಗೊಳಿಲಾಗುವುದು, ಪರಿಸರ ಸಂರಕ್ಷಣೆಗಾಗಿ ಅಗತ್ಯ ಕ್ರಮವನ್ನು ಕೈಗೊಂಡು ಕೇಂದ್ರ ಸರ್ಕಾರದ ಯೋಜನೆಗೆ ಸಹಕರಿಸುವುದು ನಮ್ಮ ಉದ್ದೇಶ ಎಂದು ತೇಜಸ್ವಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos