ಹೊಸಕೋಟೆ, ಆ. 29: ಹೊಸಕೋಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಬಿಎನ್ ಬಚ್ಚೇಗೌಡ ಅವರು ಇಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದಿಂದ ಪ್ರತಿ ವರ್ಷ ಬಡವರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಅನೇಕ ಯೋಜನೆಗಳು ಜಾರಿಗೆ ಬರುತ್ತಿದೆ. ಹಾಗೂ ಹಲವಾರು ಸೌಲಭ್ಯಗಳು ನೀಡುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಸರ್ಕಾರದ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ಕೊಂಡೊಯ್ಯುವಂತೆ ಸರ್ಕಾರಿ ಅಧಿಕಾರಿಗಳು ಮಾಡಬೇಕೆಂದು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಬಿಎನ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ನಗರಸಭೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡು, ಇದು ನಗರಸಭೆಯಾ ಅಥವಾ ಹೊಲಸು ತುಂಬಿರುವಂತೆ ಸಭೆಯೋ ಎಂದು ಕೇಳಿದರು. ನಗರಸಭೆಯ ಆಯುಕ್ತರಾದ ನಿಸಾರ್ ಅಹ್ಮದ್ ಅವರೊಂದಿಗೆ ಮಾತನಾಡಿದ ಸಂಸದ ಬಚ್ಚೇಗೌಡ, ನಗರಸಭೆಯಲ್ಲಿ ಪುಂಡರ ಹಾವಳಿ ಹಾಗೂ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ ಎಂದು ನಗರಸಭೆಯ ವಿಚಾರವಾಗಿ ತುಂಬಾ ಬೇಸರ ವ್ಯಕ್ತಪಡಿಸಿದುರ. ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಗೆ ಸೇರುವ ಆಸ್ತಿ ಬಗ್ಗೆ ಮಾಹಿತಿ ಇಲ್ಲ. ನಗರಸಭೆಯ ವಾಣಿಜ್ಯ ಮಳಿಗೆಗಳ ಸೂಕ್ತ ರೀತಿಯಲ್ಲಿ ಬಾಡಿಗೆ ವಸೂಲಿ ಮಾಡದೆ ನಷ್ಟಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ನಗರದಲ್ಲಿ ನೀರಿನ ಸರಬರಾಜು ಅಕ್ರಮ ಸಂಪರ್ಕ ನಗರದಲ್ಲೆಲ್ಲಾ ರಾರಾಜಿಸುತ್ತಿವೆ. ನಗರಸಭೆಗೆ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ನಗರಸಭೆಯನ್ನು ನಷ್ಟದ ದಾರಿಗೆ ತಳ್ಳಿದ್ದಾರೆ. ಲಂಚಾವತಾರದ ಪರಮಾವಧಿ ಮುಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರಿವರ ಪ್ರಭಾವಿಗಳ ಒತ್ತಾಯಕ್ಕೆ ಮಣಿಯದೇ ನಿಮ್ಮ ವ್ಯಾಪ್ತಿಗೆ ಬರುವ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸಂಸದರಿಗೆ ಅಹವಾಲು ಸಲ್ಲಿಸಲು ಮುಗಿಬಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯದೇವಯ್ಯ, ತಹಶೀಲ್ದಾರ್ ಕೆ ರಮೇಶ್, ಇಓ ವಸಂತ ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಡಿಟಿ ವೆಂಕಟೇಶ್ ಡಿ ಒ ಎಸ್ ಪಿ ಎನ್ ಬಿ ಸಕ್ರಿ ಹಾಜರಿದ್ದರು.