ಉಗ್ರರ ಮೇಲೆ ಕಣ್ಣಿಡಲು ಇಲಾಖೆಯಿಂದ ಕೇರಳ ಮೀನುಗಾರರಿಗೆ ಸೂಚನೆ

ಉಗ್ರರ ಮೇಲೆ ಕಣ್ಣಿಡಲು ಇಲಾಖೆಯಿಂದ ಕೇರಳ ಮೀನುಗಾರರಿಗೆ ಸೂಚನೆ

ತಿರುವನಂತಪುರ, ಮಾ.4, ನ್ಯೂಸ್ಎಕ್ಸ್ ಪ್ರೆಸ್‍:  ಕೇರಳ ಮೀನುಗಾರರು ಸಬ್‌ಮೆರಿನ್‌ಗಳ ಮೇಲೆ ಕಣ್ಣಿಡುವಂತೆ ಮತ್ತು ಯಾವುದೇ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಏಜೆನ್ಸಿಗಳಿಗೆ ವರದಿ ಮಾಡುವಂತೆ ಕೇರಳ ಮೀನುಗಾರಿಕೆ ಇಲಾಖೆ ಸೂಚನೆ ನೀಡಿದೆ.

ಭಾರತದ ವಿರುದ್ಧ ಪ್ರತೀಕಾರದ ದಾಳಿ ನಡೆಸಲು ಉಗ್ರರು ಸಮುದ್ರ ಮಾರ್ಗವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

“ಭದ್ರತಾ ಏಜೆನ್ಸಿಗಳು ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ” ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಮಹೇಶ್ ತಿಳಿಸಿದ್ದಾರೆ.

ಇದು ಕರಾವಳಿ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ನೀಡಿದ ಸಾಮಾನ್ಯ ಎಚ್ಚರಿಕೆಯಾಗಿದೆ ಎಂದು ನೌಕಾಪಡೆಯ ಮೂಲಗಳು ಸ್ಪಷ್ಟಪಡಿಸಿವೆ.

ಕಡಲೋರಾ ಜಾಗೃತ ಸಮಿತಿಗಳು, ಭಾರತೀಯ ಕರಾವಳಿ ಕಾವಲು ಪಡೆ, ಕೇರಳ ಕರಾವಳಿ ಪೊಲೀಸ್, ಸಾಗರ ಕಾನೂನು ಜಾರಿ ನಿರ್ದೇಶನಾಲಯ ಹಾಗೂ ಮೀನುಗಾರಿಕಾ ಇಲಾಖೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಫ್ರೆಶ್ ನ್ಯೂಸ್

Latest Posts

Featured Videos