ನವದೆಹಲಿ , ಆ. 7 : ಕೇಂದ್ರದ ಮಾಜಿ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವಾರಜ್ (67) ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ರಾತ್ರಿ 9.35ಕ್ಕೆ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ನೇರವಾಗಿ ತುರ್ತು ನಿಗಾ ಘಟಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ, ರಾತ್ರಿ 10 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಒಬ್ಬ ಪುತ್ರಿಯನ್ನು ಅವರು ಅಗಲಿದ್ದಾರೆ.
ಪಾರ್ಥಿವ ಶರೀರವನ್ನು ಏಮ್ಸ್ ಆಸ್ಪತ್ರೆಯಿಂದ ದಿಲ್ಲಿಯ ಸುಷ್ಮಾ ಅವರ ಮನೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಸತ್ತಿನಲ್ಲಿ ಮಾತಿನ ಬೆಂಕಿಯುಗುಳುತ್ತಿದ್ದ ಛಲಗಾರ್ತಿ, ಕೇಸರ ಪಾಳಯದ ದಕ್ಷ ನಾಯಕಿ ಹಾಗೂ ಅಪ್ಪಡ ಹಿಂದು ಸುಷ್ಮಾನ ಸ್ವರಾಜ್ ಅವರ ಜೊತೆಗಿನ ಒಡನಾಟ ನೆನೆದು ಶ್ರೀರಾಮುಲು ಭಾವುಕರಾಗಿದ್ದಾರೆ. ಅಜಾತಶತ್ರು ಸುಷ್ಮಾ ಸ್ವರಾಜ್ ಬಾರದ ಲೋಕಕ್ಕೆ ತೆರಳಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದ ಸುಷ್ಮಾ, ಸಹಜವಾಗಿ ಅಪಾರ ಆತ್ಮೀಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಶ್ರೀರಾಮುಲು ಮೆಲುಕು ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ.