ಬೆಳಗಾವಿ, ಆ. 23 : ‘ನಾನು ಪ್ರತಿ ದಿನ ಉಮೇಶ ಕತ್ತಿ ಜತೆ ಮಾತನಾಡುತ್ತೇನೆ. ಮಾತನಾಡದೆ ಇರೋಕೆ ಉಮೇಶ್ ಕತ್ತಿ ಪಾಕಿಸ್ತಾನದವರಾ? ಒಂದೇ ಕುಟುಂಬದವರಂತಿದ್ದೇವೆ. 25 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇವೆ’ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಗುರುವಾರ ಗೋಕಾಕ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಉಮೇಶ್ ಕತ್ತಿ ಅವರನ್ನು ನೀವು ಭೇಟಿ ಮಾಡಿದ್ದೀರಾ? ಅವರ ಜತೆ ಮಾತನಾಡಿದ್ದೀರಾ?’ ಎಂದು ಪ್ರಶ್ನಿಸಿದಾಗ ಸಚಿವರು ಈ ರೀತಿ ಉತ್ತರಿಸಿದರು. ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಅದನ್ನು ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ನಾಯಕರು ಬಗೆ ಹರಿಸುತ್ತಾರೆ. ಉಪ ಚುನಾವಣೆ ಎದುರಾದರೆ ಯಾರು ನಿಲ್ಲಬೇಕು? ಯಾರನ್ನು ಗೆಲ್ಲಿಸಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದರು.