ನವದೆಹಲಿ, ಸೆ. 3: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡ ದುರ್ಘಟನೆ ದೆಹಲಿಯ ಸಿಲಾಂಪುರದಲ್ಲಿ ನಡೆದಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆಯಿದ್ದು ಈಗಾಗಲೇ 6 ಮಂದಿಯನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಒಬ್ಬರನ್ನು ಹೀನಾ(22) ಎಂದು ಗುರುತಿಸಲಾಗಿದ್ದು , ಮತ್ತೊಬ್ಬರ ಕುರಿತು ಮಾಹಿತಿ ತಿಳಿದುಬಂದು ಬಂದಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ , ಕಟ್ಟಡ ಕುಸಿಯುವಾಗ ಕೆಳ ಅಂತಸ್ತಿನಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು, ಅಲ್ಲಿ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.