ಕಸದ ತೊಟ್ಟಿಯಾದ ಶಾಲಾ ಆವರಣ

ಕಸದ ತೊಟ್ಟಿಯಾದ ಶಾಲಾ ಆವರಣ

ಕೃಷ್ಣರಾಜಪುರ, ಅ. 16:  ಸರ್ಕಾರಿ ಶಾಲೆ ಮುಂಭಾಗದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿಯಾಗದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಜೀವನ ಸಾಗಿಸುವಂತಾಗಿದೆ.

ಮಹದೇವಪುರ ಕ್ಷೇತ್ರದ ಹಗದೂರು ವಾರ್ಡನ ರಾಮಗೋಂಡನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮುಂಬಾಗ ವೈಟ್ಫೀಲ್ಡ್- ಮಾರತ್ತಹಳ್ಳಿ ಮುಖ್ಯರಸ್ತೆಯ ಬದಿಯಲ್ಲಿ ಹಲವು ದಿನಗಳಿಂದ ಸಂಗ್ರಹಗೊಂಡಿರುವ ಕಸದ ರಾಶಿಯನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನಲೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ಅರೋಪ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂರಾರು ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ, ಇಲ್ಲಿ ಶೇಖರಣೆಯಾಗಿರುವ ಕಸದಿಂದ ದುರ್ನಾತ ಬೀರುತ್ತಿದ್ದು, ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕ್ಕಾಗುತ್ತಿದೆ. ಕಸ ಸುರಿಯಲು ಬಂದವರಿಗೆ ತಿಳಿ ಹೇಳಿದರು ಸಹ ಮೊಂಡುತನ ತೋರುತ್ತಾರೆ. ಹಗಲು ಹೊತ್ತಿನಲ್ಲಿ ಕಾಯುವ ಪರಿಸ್ಥಿತಿಯಿದ್ದು, ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರಾತ್ರಿಯ ವೇಳೆಯಲ್ಲಿ ಗಾಡಿ ಮೇಲೆ ಬಂದು ಕಸ ಸುರಿಯುತ್ತಿದ್ದಾರೆ. ವಿದ್ಯಾವಂತರೇ ಇಲ್ಲಿ ಕಸ ಸುರಿಯುವುದರಿಂದ ಯಾರಿಗೆ ಹೇಳುವುದು ಎಂಬುದೇ ತಿಳಿಯುವುದಿಲ್ಲ ಎಂದು ಸ್ಥಳಿಯರು ಬೇಸರ ವ್ಯಕ್ತಪಡಿಸಿದರು.

ಹಗದೂರು ವಾರ್ಡ ವ್ಯಾಪ್ತಿಯ ವಿಜಯನಗರ ವೈಟ್ಫೀಲ್ಡ್, ಗಾಂಧಿಪುರ, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ, ನಲ್ಲೂರಹಳ್ಳಿ, ಸಿದ್ದಾಪುರದಲ್ಲಿ ಪ್ರತಿದಿನ ತ್ಯಾಜ್ಯ ವಿಲೇವಾರಿ ಕೆಲಸವೂ ಸಹ ಸ

ಮರ್ಪಕವಾಗಿ ನಡೆಯುತ್ತಿಲ್ಲ. ಸಂಬಂದಪಟ್ಟ ಬಿಬಿಎಂಪಿ ಅಧಿಕಾರಿಗಳು ಕಿಂಚಿತ್ತು ಗಮನಹರಿಸಿಲ್ಲ ಎಂದು ಆರೋಪಿಸಿದರು.

ಸಾವಿರಾರು ಜನರು ಸಂಚರಿಸುವ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿದ್ದರು ಅಧಿಕಾರಿಗಳು ಕಂಡರೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ದೂರು ನೀಡಲು ಕಚೇರಿಗೆ ಹೋದರೆ ಅಲ್ಲಿಯೂ ಅಧಿಕಾರಿಗಳು ಇರುವುದಿಲ್ಲ, ಸಮಸ್ಯೆ ಬಗ್ಗೆ ಹೇಳಲು ಕಾಲ್ ಮಾಡಿದರೂ ತೆಗೆಯುವುದಿಲ್ಲ ಎಂದು ಸ್ಥಳೀಯರು ತಮ್ಮ ಅಳಲು ತೊಡಿಕೊಂಡರು.

ಶಾಲೆ ಮುಂಬಾಗ ಕಸ ಸಂಗ್ರಹಗೊಳ್ಳುತ್ತಿರುವುದರಿಂದ ತರಗತಿಯಲ್ಲಿ ಪಾಠ ಕೇಳಲು ಸಾದ್ಯವಾಗುವುದಿಲ್ಲ. ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿಯಿದೆ ಎಂದು ವಿಧ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ತೆರಳುವ ರಸ್ತೆಯ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯಲಾಗಿದೆ. ಸ್ವಚ್ಚತೆಯಿಲ್ಲದೆ ಅನೈರ್ಮಲ್ಯದಿಂದ ಕೂಡಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos