ಫಿನಾಲ್‌ ಗೆ ತಲುಪಿದ ಕರ್ನಾಟಕ ಬುಲ್ಡೋಜರ್ಸ್ ಟೀಂ

ಫಿನಾಲ್‌ ಗೆ ತಲುಪಿದ ಕರ್ನಾಟಕ ಬುಲ್ಡೋಜರ್ಸ್ ಟೀಂ

ಬೆಂಗಳೂರು: ಸಿಸಿಎಲ್ 2024 ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆದ್ದು ಫೈನಲ್ ರೌಂಡ್‌ಗೆ ತಲುಪಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಗೆಲ್ಲುವುದರ ಮೂಲಕ ಅಂತಿಮ ಸುತ್ತಿಗೆ ಸಜ್ಜಾಗಿದೆ. ಟೂರ್ನಿಯ ಟಾಸ್ಕನ್ನು ಬೆಂಗಾಲ್ ಟೈಗರ್ಸ್ ತಂಡ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 10 ಓವರ್‌ಗಳಲ್ಲಿ 3 ಕಳೆದುಕೊಂಡು 86 ಕಲೆ ಹಾಕಿತ್ತು.

ಮೊದಲು ಬೆಂಗಾಲ್ ಟೈಗರ್ಸ್ ತಂಡದಿಂದ ಜಾಮಿ 30 ಬಾಲ್‌ಗಳಲ್ಲಿ 50 ರನ್ ಸಿಡಿಸಿ ಗಮನ ಸೆಳೆದರು. ತದನಂತರ ಕರ್ನಾಟಕ ಬುಲ್ಡೋಜರ್ಸ್ ತಂಡ ಬ್ಯಾಟಿಂಗ್‌ ಅನ್ನು ಆರಂಭಿಸಿ 4 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿತು. 10 ಎಸೆತಗಳಲ್ಲಿ ಜೆಕೆ 24 ರನ್‌ ಪೇರಿಸುವುದರ ಮೂಲಕ ಚಂದನವನದ ತಂಡ 28 ರನ್‌ಗಳ ಮುನ್ನಡೆಯನ್ನು ಸಾಧಿಸಿ ಎದುರಾಳಿ ತಂಡವನ್ನು 2ನೇ ಇನ್ನಿಂಗ್ಸ್‌ಗೆ ಆಹ್ವಾನಿಸಿತು.

ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಒಳ್ಳೆ ಟಾರ್ಗೆಟ್‌ ಅನ್ನೇ ನೀಡಿದ ಬೆಂಗಾಲ್ ಟೈಗರ್ಸ್ ತಂಡ ಕೇವಲ 28 ರನ್‌ಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿತು. ಈ ರೀತಿ ಬೆಂಗಾಲ್ ಟೈಗರ್ಸ್ ಒಟ್ಟಾರೆಯಾಗಿ 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ 100 ರನ್‌ಗಳ ಟಾರ್ಗೆಟ್‌ ನೀಡಿತು.

ಕರ್ನಾಟಕ ಬುಲ್ಡೋಜರ್ಸ್ ತಂಡ 100 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿ ನಿಧಾನವಾಗಿ ತಮ್ಮ ಗುರಿ ಮುಟ್ಟುವ ಪ್ರಯತ್ನ ಮಾಡಿತು. ಈ ತಂಡ ಪ್ರತಿ ಓವರ್‌ಗೆ 10 ರನ್‌ಗಳನ್ನು ಗಳಿಸಬೇಕಾಗಿದ್ದ ಕಾರಣ, ದೊಡ್ಡ ಹೊಡೆತಗಳಿಗೆ ಕೈ ಹಾಕದೇ ಒಂದು, ಎರಡು ರನ್ ಕದಿಯುತ್ತಾ ಆಗೊಮ್ಮೆ ಈಗೊಮ್ಮೆ ಬೌಂಡರಿ ಬಾರಿಸುತ್ತಾ ಕೊನೆಯದಾಗಿ 8 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯವನ್ನು ಸಾಧಿಸಿತು. ಸಿಸಿಎಲ್‌ 2024ರಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಹುಮ್ಮಸ್ಸಿನಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos