ಕರಡು ಸಿಡಿಪಿಗೆ ‌ಸರ್ಕಾರದ ಒಪ್ಪಿಗೆ ಸಿಗದಿರುವುದು ಅಭಿವೃದ್ಧಿಗೆ ಹಿನ್ನಡೆ

ಕರಡು ಸಿಡಿಪಿಗೆ ‌ಸರ್ಕಾರದ ಒಪ್ಪಿಗೆ ಸಿಗದಿರುವುದು ಅಭಿವೃದ್ಧಿಗೆ ಹಿನ್ನಡೆ

ಬೆಂಗಳೂರು, ಆ. 7: ಸಮಗ್ರ ಮಹಾನಗರದ ಅಭಿವೃದ್ಧಿ ಯೋಜನೆಗಳ ದಿಕ್ಸೂಚಿಯಾಗಲಿರುವ ‌ಸಿಡಿಪಿ‌-2031. ರ ಕರಡು ಪ್ರಸ್ತಾವನೆಗೆ ಸರ್ಕಾರದ ಒಪ್ಪಿಗೆ ಸಿಗದಿರುವುದು ನಗರದ ಯೋಜನಾ ಬದ್ದ ಅಭಿವೃದ್ಧಿಗೆ ಸಂಪೂರ್ಣ ಹಿನ್ನಡೆ ಆಗಿದೆ.

ಮೂರು ವರ್ಷಗಳಿಂದ ಕರಡು ಪ್ರತಿಗಳಲ್ಲಿ ಏನೇಲ್ಲಾ ಅಂಶಗಳನ್ನು ಸೇರ್ಪಡೆ ಮಾಡಬೇಕು ಎಂಬ ಸಲಹೆ ಸೂಚನೆ ಆಧರಿಸಿ ಸಿಡಿಪಿ ಸಿದ್ದಪಡಿಸಲಾಗಿತ್ತು. ನಗರದಲ್ಲಿ ಪ್ರಸ್ತುತ ವಾಹನಗಳ ದಟ್ಟಣೆ, ಕಿಷ್ಕಿಂಧೆಯಂತಹ ಸಮಸ್ಯೆಗಳು, ಕಸದ ಸಮಸ್ಯೆ ಪರಿಹಾರ ಒದಗಿಸುವ ಕೆಲವೊಂದು ಮಾರ್ಗಸೂಚಿಗಳನ್ನು ರೂಪಿಸಲಾಗಿತ್ತು.

ಇವೆಲ್ಲ ಅಂಶಗಳನ್ನು ಆಧರಿಸಿ ಹಿಂದಿನ ಮೈತ್ರಿ ಸರ್ಕಾರ ಇದ್ದ ಅವದಿಯಲ್ಲಿ ನಾನಾ ಹಂತದ ಚರ್ಚೆ ನಡೆಸಿತ್ತಾದರೂ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿರಲಿಲ್ಲ. ಸಿಎಂ ಹಾಗೂ ಡಿಸಿಎಂ ಮಾರ್ಗದರ್ಶನದಲ್ಲಿ ಹಲವಾರು ಸಭೆಗಳಲ್ಲಿ ಚರ್ಚೆ ನಡೆಸಿದರೂ, ನಿರೀಕ್ಷಿತ ಫಲಿತಾಂಶಬರಲಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ನೂರಾರು ಸಭೆಗಳು ನಡೆದಿವೆ ಆದರೂ, ಪ್ರಸ್ತಾವನೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿಲ್ಲ.

ಕಳೆದ ಜನವರಿಯಲ್ಲಿ ಪರಿಷ್ಕೃತ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ ಆಗಿದ್ದು, ಸರ್ಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಬಾಕಿ ಉಳಿದಿವೆ.

ಉಪಕ್ರಮಗಳು

*ಸಿಡಿಪಿ ಕುರಿತು ನಗರಾಭಿವೃದ್ಧಿ ಇಲಾಖೆಯಿಂದ ಸರ್ಕಾಕ್ಕೆ ಸ್ಪಷ್ಟ ಮಾಹಿತಿ.

* ಸಂಪುಟ ಸಭೆಯಲ್ಲಿ ಕರಡು ಸಿಡಿಪಿ ಬಗ್ಗೆ ಚರ್ಚಿಸಿ ತೀರ್ಮಾನ

*ಕೋಟ್೯ ಆದೇಶದಂತೆ ಸ್ಪಷ್ಟ ಜಾರಿಗೆ ಆದ್ಯತೆ ನೀಡುವುದು.

ಜನಸ್ನೇಹಿ ಯೋಜನೆಗಳಿಗೆ ಒತ್ತು ನೀಡಿ ಸಾರ್ವಜನಿಕರ ಹಿತ ಕಾಯುವುದು.

* ನಿರಂತರ ಮೇಲುಸ್ತುವಾರಿ ಸಮಿತಿ ಮೂಲಕ ಸಭೆ ಹಾಗೂ ನಿಗಾ ವಹಿಸಿ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡುವುದು.

ಪರಿಸರ ಕಾಳಜಿಗೆ ಒತ್ತು

ನಗರದ ದಟ್ಟಣೆ ನಿವಾರಣೆ ಸಮೂಹ ಸಾರಿಗೆಯಿಂದ ಮಾತ್ರ ಸಾದ್ಯ. ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ವಾಹನ ಬಳಕೆ ಮಾಡುವುದರಿಂದ ಕಿಷ್ಕಿಂಧೆಯ ವಾತಾವರಣ ಕಡಿಮೆ ಆಗಲಿದೆ. ಇದರ ಸಾಕರಕ್ಕೆ ಬಿಎಂಟಿಸಿ ಬಸ್ ಸೇವೆ, ಮೆಟ್ರೋ, ಮಾನೊ ರೈಲು, ಉಪನಗರ ರೈಲು ಸೇವೆಗಳನ್ನು ಸಮನ್ವಯಗೊಳಿಸಲು ಪ್ರಸ್ತಾವನೆ ಕೂಡಾ ಇದೆ.

 

ಅನುಷ್ಟಾನ ಸಮಿತಿ

ಹೊಸ ಸಿಡಿಪಿ ಅನುಷ್ಟಾನಕ್ಕೆ ತರಲು ಮಹಾನಗರ ಯೋಜನಾ ಸಮಿತಿಗೆ ಹೆಚ್ಚಿನ ಅಧಿಕಾರ ಕಲ್ಪಿಸಲು ಪ್ರಸ್ತಾಪಿಸಲಾಗಿದೆ. ಸಿಡಿಪಿ ವ್ಯಾಪ್ತಗೆ ಬರುವ ಪಾಲಿಕೆ, ಪೌರಸಂಸ್ಥೆ, ಹಾಗೂ ಪಂಚಾಯ್ತಿ ವ್ಯಾಪ್ತಿಯಲ್ಲಿ ಯೋಜನೆಗಳ ಜಾರಿ, ಸಂಪನ್ಮೂಲಗಳ ಹಂಚಿಕೆ, ಮಾಸ್ಟರ್ಸ್‌ ಪ್ಲಾನ್ ಜಾರಿಯ ವಿಧಾನದಲ್ಲಿ ಜನಸ್ನೇಹಿ ಆಡಳಿತ ವ್ಯವಸ್ಥೆಗೆ ಆದ್ಯತೆ ಸಿಗಲಿದೆ.    ಹಾಗಾಗಿ ಮಾಸ್ಟರ್ ಪ್ಲಾನ್ ಸಮನ್ವಯ ಹಾಗೂ ನಿರ್ವಹಣಾ ಸಮಿತಿಗೆ ಹೆಚ್ಚು  ಅಧಿಕಾರ ನೀಡಲು ಪ್ರಸ್ತಾಪಿಸಲಾಗಿದೆ.

ಪರಿಷ್ಕೃತ ಕರಡು ರೂಪದ ಸಿಡಿಪಿ ಅನುಷ್ಟಾನ ಮಾಡಲು ‌ಕಳೆದ ಜನವರಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ.ಸರ್ಕಾರದ ಒಪ್ಪಿಗೆ ಸೂಚಿಸಿ ಸಂಪುಟ ಅನುಮೋದನೆ ನೀಡಬೇಕಿರುವುದಷ್ಟೆ ಬಾಕಿ ಇದ್ದು ಸರ್ಕಾರದ ಆದೇಶದನ್ವಯ ಯೋಜನೆ ಕಾರ್ಯಗತಗೊಳಿಸುವುದಾಗಿ ಬಿಡಿಎ ನಗರ ಯೋಜನಾ ವಿಭಾಗದ ಹಿರಿಯ ಅಧಿಕಾರಯೊಬ್ಬರು ತಿಳಿಸಿದ್ದಾರೆ.

ಮಾಸ್ಟರ್ ಪ್ಲಾನ್ ಕಾಲಮಿತಿಯೊಳಗೆ ಪಡೆಯದಿರುವುದು ನಗರದ ಹಲವು ಯೋಜನೆಗಳು ಕುಂಟಿತಗೊಂಡಿದ್ದ, ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಸರ್ಕಾರಿ ಅಧಿಕಾರಿಗಳು ಸಿಡಿಪಿಗೆ ಅಂಟಿಕೊಂಡಿರುವುದೆ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎಂದು ನಮ್ಮ ಬೆಂಗಳೂರು ಪ್ರತಿಷ್ಟಾನದ ಸಂಚಾಲಕ ಸುರೇಶ್ ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos