ಬ್ಯಾಟರಾಯನಪುರ, ನ. 29: ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೆಹಳ್ಳಿಯಲ್ಲಿ ಜೈ ಮಾರುತಿ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಆಟೋ ಚಾಲಕರ ಜೊತೆ ಸ್ನೇಹಮಯಿಯಾಗಿ ವರ್ತಿಸಿದರು ಹಾಗೂ ಅವರ ಬಳಿ ಸೆಲ್ಫಿ ತೆಗೆದುಕೊಂಡರು.