ಕಲುಷಿತ ನಗರಗಳಲ್ಲಿ ಬೆಂಗಳೂರು !

ಕಲುಷಿತ ನಗರಗಳಲ್ಲಿ ಬೆಂಗಳೂರು !

ಬೆಂಗಳೂರು, ಆ. 23 :  ಭಾರತದ ಅತಿ ಹೆಚ್ಚು ಕಲುಷಿತ ನಗರಗಳಲ್ಲಿ ಪಟ್ಟಿಯಲ್ಲಿ ಬೆಂಗಳೂರು ಕೂಡ ಸೇರಿದೆ. ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮ ಪಟ್ಟಿಯ 102 ನಗರಗಳ ಪೈಕಿ ಬೆಂಗಳೂರು ಒಂದಾಗಿದೆ. ಐದು ವರ್ಷಗಳಿಂದ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಕಡಿಮೆಯಾಗಿದೆ ಎಂದು ಪರಿಸರ -ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಉಪ ಕಾರ್ಯದರ್ಶಿ ಸತ್ಯೇಂದ್ರ ಕುಮಾರ್ ತಿಳಿಸಿದ್ದಾರೆ.
ಕಲುಷಿತ ನಗರಗಳ ಅಭಿವೃದ್ಧಿ ಗೆ ಕೇಂದ್ರ ಸರ್ಕಾರ 10 ಕೋಟಿ ರೂ.ರು ಅನುದಾನದಿಂದ ಬೆಂಗಳೂರಿನಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಲಾಗುತ್ತದೆ. ವಾಯು ಮಾಲಿನ್ಯ ತಗ್ಗಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕಾಗಿ ಅನುಸರಿಸುವ ಕ್ರಮದ ಬಗ್ಗೆ ರಾಷ್ಚ್ರೀಯ ಹಸಿರು ಮಂಡಳಿಗೆ ವರದಿ ಸಲ್ಲಿಸಲಾಗುವುದು, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಧಾರವಾಡ ಮತ್ತು ದಾವಣಗೆರೆ ಕೂಡ ಕಲುಷಿತ ನಗರಗಳಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos