ಮನೆಗಳ್ಳರ ಬಂಧನ, ವಾರಸುದಾರರಿಗೆ ಚಿನ್ನ, ವಸ್ತುಗಳ ಹಸ್ತಾಂತ

ಮನೆಗಳ್ಳರ ಬಂಧನ, ವಾರಸುದಾರರಿಗೆ ಚಿನ್ನ, ವಸ್ತುಗಳ ಹಸ್ತಾಂತ

ಬೆಂಗಳೂರು, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ವಿವಿಧೆಡೆ ನಡೆದ 13 ಮನೆಗಳವು ಪ್ರಕರಣವನ್ನು ಪತ್ತೆ ಹಚ್ಚಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, 76 ಸಾವಿರ ರೂ. ನಗದು, 16 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಮತ್ತು 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಲೂರು ತಾಲೂಕಿನ ನಳದಿಮ್ಮನಹಳ್ಳಿ ನಿವಾಸಿ ಮಂಜುನಾಥ್(21) ಮತ್ತು ಕೋಲಾರದ ಸುರೇಶ್ ಅಲಿಯಾಸ್ ಸೂರಿ(26) ಬಂಧಿತ ಆರೋಪಿಗಳು.

ಸದರಿ ಆರೋಪಿಗಳು ಆವಲಹಳ್ಳಿ, ತ್ಯಾಮಗೊಂಡ್ಲು, ಅನುಗೊಂಡನಹಳ್ಳಿ, ಮಾಸ್ತಿ, ಶ್ರೀನಿವಾಸಪುರ, ವೇಮಗಲ್ ಮತ್ತು ನಂದಗುಡಿ ಠಾಣಾ ಸರಹದ್ದಿನಲ್ಲಿ ಮನೆಗಳವು ನಡೆಸಿದ್ದರು.

ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು ಕಳವು ಮಾಲುಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos