ಆ.ನ.ಸುಬ್ಬರಾಯರು ಕಟ್ಟಿದ ಸಂಸ್ಥೆಯೇ ಕಲಾಮಂದಿರ.

ಆ.ನ.ಸುಬ್ಬರಾಯರು ಕಟ್ಟಿದ ಸಂಸ್ಥೆಯೇ ಕಲಾಮಂದಿರ.

ಬೆಂಗಳೂರು, ಆ. 26: ಸಹಸ್ರಾರು ಕಲಾವಿದರನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ರಾಜ್ಯದ ಮೊದಲ ಕಲಾಶಾಲೆಯೆಂಬ ಕೀರ್ತಿ ಹೊಂದಿರುವ ‘ಕಲಾಮಂದಿರ’ ಶತಮಾನೋತ್ಸವದ ಸಂಭ್ಮದಲ್ಲಿದೆ. ಹನುಮಂತನಗರದ ಆಂಜನೇಯ ಗುಡ್ಡದಲ್ಲಿರುವ ಸ್ಕೂಲ್ ಆಫ್ ಆಟ್೯ ಲಕ್ಷಾಂತರ ಕಲಾವಿದರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದೆ.

ಶತಮಾನೋತ್ಸವ ಅಂಗವಾಗಿ ಇಡೀ ವರ್ಷ ಕಲಾಪ್ರದರ್ಶನ, ಶಿಬಿರ, ಉಪನ್ಯಾಸ ಮಾಲೆ, ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಲೆಯ ಮಹತ್ವ ಪ್ರತಿಬಿಂಬಿಸುವ ಉದ್ದೇಶದಿಂದ ಆ.ನಾ.ಸುಬ್ಬರಾಯರು ಕಲಾಮಂದಿರ ಸ್ಥಾಪಿಸಿದರು. ಹಿರಿಯ ಕಲಾವಿದರಾದ ಬಿ.ಕೆ.ಎಸ್.ವರ್ಮಾ, ಕನಕಾಮೂರ್ತಿ, ಖ್ಯಾತ ನಟ ಪ್ರಕಾಶ್ ರಾಜ್  ಆ.ನಾ. ಸುಬ್ಬರಾಯರ ಕಲಾಮಂದಿರದಲ್ಲಿ ಕಲಿತವರು.

ಅ.ನಾ.ಸುಬ್ಬರಾಯರು 1919ರಲ್ಲಿ ಸ್ಥಾಪಿಸಿದ  ಕಲಾಮಂದಿರಕ್ಕೆ ಹಲವು ವರ್ಷಗಳ ಕಾಲ ನೆಲೆ ಇರಲಿಲ್ಲ. 1937 ರವರೆಗೆ ಮೆಜೆಸ್ಟಿಕ್ ನ ಆನಂದ ಮಹಲ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿತ್ತು.1938 ರಿಂದ 1943ರವರೆಗೆ ಬಳೆ ಪೇಟೆಯ ಸುಗ್ರೀವ ದೇವಾಲಯದ ಹತ್ತಿರ, 1994 ರಿಂದ 1996 ಗಾಂಧಿ ಬಜಾರ್ ನ ಡಿವಿಜಿ ರಸ್ತೆಯಲ್ಲಿತ್ತು. 1996 ರಿಂದ ಹನುಮಂತನಗರದ‌ ರಾಮಾಂಜನೇಯ ಗುಡ್ಡದ ಬಳಿ ನಿರ್ಮಿಸಿರುವ ಸ್ವಂತ ಕಟ್ಟಡದಲ್ಲಿ ಕಾರ್ಯನಿರತವಾಗಿದೆ.

ಅನಸು ಹಿನ್ನೆಲೆ

ಹುಟಿದ್ದು 1881ರಲ್ಲಿ ಮಂಡ್ಯ ಜಿಲ್ಲೆ ಅಕ್ಕಿ ಹೆಬ್ಬಾಳ ಗ್ರಾಮದಲ್ಲಿ ಬಡ ಕುಟುಂಬಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಮಾಡುವಾಗ ವಾರಾನ್ನ ಆಶ್ರಯಿಸಿದ್ದರು. ನಾಗಮಂಗಲದಲ್ಲಿ ಪ್ರೌಢಶಾಲಾ ಶಕ್ಷಣ ಮುಂದುವರಿದರು. ಹೊಯ್ಸಳ ಕಾಲದ ಶಿಲ್ಪಕಲೆ ಇವರ ಗಮನ ಸೆಳೆದು, ಕಲಾವಿದನಾಗಬೇಕೆಂಬ ಮೊಳಕೆ ಚಿಗುರೊಡೆಯಿತು.

ಆದರೆ, ಮನೆಯಲ್ಲಿನ ಬಡತನ ಶಿಕ್ಷಣ ಮುಂದುವರಿಸಲಾಗದೆ ಅಕ್ಕಿ ಹೆಬ್ಬಾಳಕ್ಕೆ ವಾಪಸ್ಸಾಗಿ ವ್ಯವಸಾಯದೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದರು. ನಂತರ ಮೈಸೂರಿಗೆ ಬಂದು ಜಯಚಾಮರಾಜೇಂದ್ರ ಒಡೆಯರ್ ಟೆಕ್ನಿಕಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚಿತ್ರಕಲಾ ಡಿಪ್ಲೊಮಾ ಪೂರ್ಣಗೊಳಿಸಿ ಬೆಂಗಳೂರಿಗೆ ಬಂದು ಚಿತ್ರಕಲಾ ಶಿಕ್ಷಕರಾಗಿ ಸೇವೆ ಆರಂಭಿಸಿ ನಂತರ ಕಲಾಮಂದಿರ ನಿರ್ಮಿಸಿದರು.

ಸೈಕಲ್ ಸುತ್ತಾಟ

ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸುಬ್ಬಾರಾಯರು ಸೈಕಲ್ ನಲ್ಲಿ ಸುತ್ತಾಡುತ್ತಿದ್ದರು. ಅನಸು ಅವರ ಶ್ರಮ ಜೀವನದ ಸಂಕೇತವಾಗಿತ್ತು ಎಂದೂ ಅನಾಸು ಅವರ ಮೊಮ್ಮಗ, ಕಲಾಮಂದಿರಾ ಪ್ರಾಚಾರ್ಯ ಎಂ.ಎಂ.ಪ್ರಕಾಶ್ ಹೇಳಿದರು.

2012 ರಲ್ಲಿ ಕಲಾಮಂದಿರದಲ್ಲಿ  ಪೇಂಟಿಂಗ್ ಪದವಿ ಮುಗಿಸಿದ್ದು, ನನ್ನ ಮುಂದಿನ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿತು.ಇದರ ಫಲವಾಗಿ ನಾನಿಂದು ಸಿನಿಮಾ ಉದ್ಯಮದಲ್ಲಿ ಪ್ರೊಡಕ್ಷನ್ ಡಿಸೈನರ್ ಆಗಿರುವುದಾಗಿ ಆರ್.ನಿಖಿಲ್ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos