ರಜನಿ ಪುತ್ರಿಯ ‘ವಿವಾಹ’ ಸಮಾರಂಭದಲ್ಲಿ ಕಾಜೋಲ್

ರಜನಿ ಪುತ್ರಿಯ ‘ವಿವಾಹ’ ಸಮಾರಂಭದಲ್ಲಿ ಕಾಜೋಲ್

ಚನ್ನೈ: ಬಾಲಿವುಡ್ ನಟಿ ಕಾಜೋಲ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿನ ಸಂಭ್ರಮದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದೊಂದಿಗೆ ಕಾಜೋಲ್ ಶುಭ ಕೋರಿದ್ದಾರೆ. ಸೌಂದರ್ಯ, ಸೋಮವಾರ ಚೆನ್ನೈನಲ್ಲಿ ವಿಶಾಗನ್ ವನಗಮುಡಿ ಅವರೊಂದಿಗೆ ಸಪ್ತಪದಿ ತುಳಿದರು.

ಈ ಸಮಾರಂಭದಲ್ಲಿ ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೈಪ್ರೊಫೈಲ್ ಅತಿಥಿಗಳು ಪಾಲ್ಗೊಂಡಿದ್ದರು.

ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ, ನಟ ಕಮಲಹಾಸನ್, ಮೋಹನ್ ಬಾಬು, ಪ್ರಭು, ವಿಕ್ರಂ ಪ್ರಭು, ಅದಿತಿ ರಾವ್ ಹೈದರಿ, ಪಿ.ವಾಸು, ಕೆ.ಎಸ್ . ರವಿಕುಮಾರ್ ಸಮಾರಂಭದಲ್ಲಿ ಗಮನ ಸೆಳೆದರು.

ಇದು ಸೌಂದರ್ಯ ಅವರ ಎರಡನೇ ವಿವಾಹವಾಗಿದ್ದು, ಅವರು ಈ ಮುಂಚೆ ಕೈಗಾರಿಕೋದ್ಯಮಿ ಅಶ್ವಿನ್ ರಾಮಕುಮಾರ್ ಅವರೊಂದಿಗೆ ಏಳು ವರ್ಷ ಸಂಸಾರ ನಡೆಸಿದ್ದರು.
2016ರಲ್ಲಿ ಅವರಿಬ್ಬರ ನಡುವೆ ವಿವಾಹ ವಿಚ್ಛೇದನವಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos