`ಕೈ’ ಕೊಟ್ಟು ಬಿಜೆಪಿ ಸೇರಿದ ಮೂವರು ಶಾಸಕರು ಚುನಾವಣೆ ಮುಗಿದ್ಮೇಲೆ ಮನೆ ಸೇರ್ತಾರೆ: ಪ್ರಿಯಾಂಕ್ ಖರ್ಗೆ

`ಕೈ’ ಕೊಟ್ಟು ಬಿಜೆಪಿ ಸೇರಿದ ಮೂವರು ಶಾಸಕರು ಚುನಾವಣೆ ಮುಗಿದ್ಮೇಲೆ ಮನೆ ಸೇರ್ತಾರೆ: ಪ್ರಿಯಾಂಕ್ ಖರ್ಗೆ

ಕಲಬುರ್ಗಿ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್, ಮಾಲಿಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರು ಉದ್ಭವ ಮೂರ್ತಿಗಳಾಗಿದ್ದು, ಚುನಾವಣೆ ಬಳಿಕ ಮನೆಗೆ ಹೋಗ್ತಾರೆ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸುರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಈ ಮೂರು ಶಾಸಕರು ತ್ರಿಮೂರ್ತಿಗಳು. ಒಂದು ರೀತಿ ಉದ್ಭವಮೂರ್ತಿಗಳು ಹಾಗೆ, ಈ ಚುನಾವಣೆ ಬಳಿಕ ಅವರು ಮನೆಗೆ ಹೋಗ್ತಾರೆ ಎಂದರು.

ಬಿಜೆಪಿಯವರು ಲೋಕಸಭೆಗೆ ಜಾಧವ್ ಹೆಸರು ಘೋಷಿಸಿಲ್ಲ. ಜಾಧವ್ ಅವರೇ ಸ್ವಯಂ ಘೋಷಿತ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಜಾಧವ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನಮಗೆ ಚುನಾವಣೆ ಮಾಡೋದು ಗೊತ್ತು ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos