ಬೆಂಗಳೂರು, ಅ. 10: ನಮ್ಮ ನಿರಿಕ್ಷೆಗೆ ಮಿರಿ ಇವತ್ತಿನ ಪ್ರತಿಭಟನೆಯಲ್ಲಿ ಜನ ಸೇರಿದ್ದಾರೆ ಕೇವಲ ಬೆಂಗಳೂರು ನಗರದ ಜನ ಅಷ್ಟೆ ಅಲ್ಲ ಉತ್ತರ ಕರ್ನಾಟಕ ಹಾಗು ರಾಜ್ಯದ ಎಲ್ಲಾ ಭಾಗದ ಜನ ಕೂಡ ಇವತ್ತಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮಾದ್ಯಮಗಳು ಇವತ್ತಿನ ಪ್ರತಿಭಟನೆಗೆ ನೀಡಿದ ಸಹಕಾರಕ್ಕೆ ನಾನು ತಲೆ ಬಾಗಿ ಧನ್ಯವಾದಗಳನ್ನು ತಿಳಿಸುತ್ತೆನೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಅವರು ತಿಳಿಸಿದರು. ನೆರೆ ಸಂತ್ರಸ್ಥರ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ನನಗೆ ಬಾರಿ ನೋವು ತಂದಿದೆ ಆದ್ದರಿಂದ ಇಂದು ನಾನು ಪಾದ ಯಾತ್ರೆ ಮಾಡಿದ್ದೆನೆ. ನಮ್ಮ ಬಗ್ಗೆ ಯಡಿಯೂರಪ್ಪ ಕರ್ಣ ಕಠೋರವಾಗಿ ಮಾತನಾಡ್ತಾರೆ ಆದ್ರೆ ಅವರ ಬಗ್ಗೆ ನಾನು ಕೇವಲ ವಾಗಿ ಮಾತನಾಡುವುದಿಲ್ಲ.
ಅಪ್ಪ ಮಕ್ಕಳನ್ನು ಮುಗಿಸುವುದೆ ನನ್ನ ಗುರಿ ಅಂತಾ ಬಿಎಸ್ ವೈ ಹೇಳ್ತಾರೆ. ಯಾಕಪ್ಪಾ..? ಎನ್ ತಪ್ಪ ಮಾಡಿದೆವಿ ನಾವು. ಜನರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿ ಬಂದವರು ನಾವು. ನಮ್ಮನ್ನು ಮುಗಿಸೊದು ಬಿಡೊದು ಈ ರಾಜ್ಯದ ಜನರಿಂದ ಮಾತ್ರ ಸಾಧ್ಯ. ಯಡಿಯೂರಪ್ಪ ನವರೆ ನಿಮ್ಮಂತಹ ನಾಯಕರಿಂದ ಅಲ್ಲಾ ಯಡಿಯೂರಪ್ಪನವರೇ ಮೊದಲು ರಾಜ್ಯದ ಸಂಕಷ್ಟವನ್ನು ನಿವಾರಣೆ ಮಾಡಿ ನಂತರ ರಾಜಕೀಯ ಮಾಡಿ.
ನಾನು ಇಂದು ಸಂಸತ್ತಿಗೆ ಹೋಗುವ ಶಕ್ತಿ ಕಳೆದುಕೊಂಡಿದ್ದೆನೆ. ಆದ್ರೆ ನಾನು ಮನೆಯಲ್ಲಿ ಕುಳಿತುಕೊಳ್ಳೊದಿಲ್ಲ. ರಾಜ್ಯದ ಜನರಿಗಾಗಿ ಕೊನೆ ಉಸಿರು ಇರೊವರೆಗೂ ಹೋರಾಟ ಮಾಡ್ತೆನಿ.
ಕುಮಾರಸ್ವಾಮಿ ಯವರು ನವೆಂಬರ್ 1 ರಿಂದ ರಾಜ್ಯದ ಜನತೆಗಾಗಿ ಹೋರಾಟ ಮಾಡ್ತಾರೆ. ನೀವೇಲ್ಲಾ ಅದಕ್ಕೆ ಸಹಕಾರ ಕೋಡಬೇಕು. ಅದರ ಹೊರತಾಗಿ ನಾನು ಎನನ್ನು ಮಾತನಾಡುವುದಿಲ್ಲ. ಈ ಪಕ್ಷ ಇರೊದು ಒಂದು ಕುಟುಂಬಕ್ಕಾಗಿ ಅಲ್ಲ. ರಾಜ್ಯದ ಜನರ ಅಭಿವೃದ್ಧಿಗಾಗಿ. ನಾನು ಹೋದ ಮೇಲೆಯೂ ರಾಜ್ಯದಲ್ಲಿ ಜೆಡಿಎಸ್ ಇರಬೇಕು. ರಾಜ್ಯ ಸರ್ಕಾರ ಎಷ್ಟು ನಷ್ಟ ಆಗಿದೆ ಅಂತ ಕೇಂದ್ರಕ್ಕೆ ಅಂದಾಜು
ಪಟ್ಟಿ ಕಳಿಸಿದ್ದಾರೆ.
ಲೋಪದೋಷ ಇದೆ ಅಂತ ಹೇಳಿದ ಬಳಿಕ, ಸರಿಪಡಿಸಿ ಕಳಿಸಲಾಗಿತ್ತು. ಅದಾದ ಬಳಿಕ ಬಂದಿದ್ದು ಕೇವಲ 1200 ಕೋಟಿಯಷ್ಟೇ. ಎರಡೂ ಕಡೆ ಒಂದೇ ಸರ್ಕಾರವಿದ್ರೂ ಇವರ ನಡವಳಿಕೆ ಬೇಸರ ತರಿಸಿದೆ. ಮೈತ್ರಿ ಸರ್ಕಾರ ನಡವಳಿಕೆ ಬೇರೆಯೇ ಆಗಿರಬಹುದು. ಇಂದು ಅವರು ಅಪ್ಪ ಮತ್ತು ಮಗನನ್ನ ಮುಗಿಸೋದೆ ನನ್ನ ಗುರಿ ಅಂತ ಹೇಳಿದ್ದಾರೆ. ಯಾಕೆ ಮುಗಿಸುತ್ತಾರೆ, ನಾನು ರಾಜ್ಯಾದ ಹಿತಾಸಕ್ತಿಗೆ ಹೋರಾಟ ಮಾಡಿದೆ ಅದಕ್ಕೆ ಮುಗಿಸ್ತೀರ ? ಯಾರನ್ನೂ ಮೂಲೆಗೆ ಕೂರಿಸಲು ಸಾದ್ಯವಿಲ್ಲ. ರಾಜ್ಯದ ಜನತೆ ಕೈಯಲ್ಲಿ ಮಾತ್ರ ಮೂಲೆಗೆ ಕೂರಿಸಲು ಸಾಧ್ಯ. ನಾನು ಬೆಳಗಾವಿ ಜಿಲ್ಲೆಯಲ್ಲಿ ಆಗ್ತಿರೋ ಸಮಸ್ಯೆಯನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಇದು ಇವತ್ತಿನ ಸರ್ಕಾರಗಳಿಗೆ ತಿಳಿಯುತ್ತಿಲ್ಲವೇ ?.
ಅಂದು ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಪ್ರಕೃತಿ ವಿಕೋಪಕ್ಕೆ ತಕ್ಷಣ ಹಣ ಬಿಡುಗಡೆ ಮಾಡಿದ್ದೇವೆ. ಇದನ್ನ ಇಲ್ಲಿಗೆ ಬಿಡೋದಿಲ್ಲ, ಕೂಡಲೇ ಹಣ ಬಿಡುಗಡೆ ಮಾಡಲೇಬೇಕು. ಅವರು ಪ್ರಧಾನಮಂತ್ರಿಗಳು ಅವರಿಗೆ ಗೌರವ ಕೊಡಬೇಡಿ ಅಂತ ನಾನು ಹೇಳೋದಿಲ್ಲ. ಆದ್ರೆ ಅವರ ಪ್ರಧಾನಿಗೂ, ನನಗೂ ಸಂಬಂಧವಿಲ್ಲ. 1200 ಕೋಟಿ ಹಣ ಎತ್ತ ಸಾಲುತ್ತದೆ. ತಕ್ಷಣ ಹೆಚ್ಚಿನ ಹಣ ಬಿಡುಗಡೆ ಮಾಡಲೇಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಸಾಲಮನ್ನ ಮಾಡೋದಾಗಿ ಹೇಳಿದ್ದೆವು ಅದನ್ನ ಮಾಡೋದು ಎಷ್ಟು ಕಷ್ಟವಾಯ್ತು ಅದು ಕುಮಾರಸ್ವಾಮಿ ಅವರಿಗೆ ಗೊತ್ತು.
ಕರುಣಾನಿಧಿ ಸತ್ತ ಬಳಿಕ ಅವರ ಮಗ, ಸ್ಟಾಲಿನ್ ಅಪ್ಪನ ಹೆಸರು ಉಳಿಸಿದ್ದಾನೆ. ಮುಂದಿನ ದಿನಗಳಲ್ಲಿ ಈ ರಾಜ್ಯದ ಹಿತಾಸಕ್ತಿಗೋಸ್ಕರ ನೀವೆಲ್ಲ ಸೇರಿ ಈ ಪಕ್ಷ ಉಳಿಸಬೇಕು. ನಿಮ್ಮ ಪರ ನಿಂತು ಹೋರಾಟ ನಡೆಸೋದೆ ನನ್ನ ಗುರಿ, ಯಾವುದಕ್ಕೂ ರಾಜಿಯಾಗೋದಿಲ್ಲ. ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿಟಿಂ ಅಂತಾ ಟಿಕೆ ಮಾಡಿದ್ರು ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷರಗಿದ್ದವರ ಬಗ್ಗೆ ನಾನು ಮಾತನಾಡೊದಿಲ್ಲ. ಆದ್ರೆ ಆ ಮಾತು ನನಗೆ ಬಹಳಷ್ಟು ನೋವು ತಂದಿದೆ. ಅದು ಅವರು ಹೇಳಿದ್ದು ಅಲ್ಲ ಅವರ ಕಡೆಯಿಂದ ಬೇರೆ ಯಾರೋ ಹೇಳಿಸಿದ್ರು ಎಂದು ಮಾಜಿ ಪ್ರಧಾನಿ ಹೇಳಿದರು