ಜೆಡಿಎಸ್ ಶಾಸಕರು ಬಿಜೆಪಿಗೆ ಜಂಪ್..!

ಜೆಡಿಎಸ್ ಶಾಸಕರು ಬಿಜೆಪಿಗೆ ಜಂಪ್..!

ಬೆಂಗಳೂರು, ನ. 24 : ಇತ್ತೀಚೆಗೆ ನಡೆದಲ ಹಲವು ರಾಜಕೀಯ ಬೆಳವಣಿಗೆಳಲ್ಲಿ ಜೆಡಿಎಸ್ ಶಾಸಕರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಜಂಪ್ ಮಾಡಿದ್ದಾರೆ, ಹೀಗಾಗಿ ಮತ್ತೆ ಬೆಂಗಳನ್ನು ತನ್ನ ಹಿಡಿತಕ್ಕೆ ತೆಗೆದುತೊಳ್ಳಲು ಜೆಡಿಎಸ್ ಹವಣಿಸುತ್ತಿದೆ.
2013 ರಲ್ಲಿ ಬೆಂಗಳೂರು ನಗರದಲ್ಲಿ ಮೂವರು ಜೆಡಿಎಸ್ ಶಾಸಕರಿದ್ದರು, ಮಹಾಲಕ್ಷ್ಮಿ ಲೇಔಟ್, ಚಾಮರಾಜಪೇಟೆ ಹಾಗೂ ಪುಲಕೇಶಿ ನಗರ, ಮತ್ತು 15 ಬಿಬಿಎಂಪಿ ಕೌನ್ಸಿನಲರ್ ಗಳಿದ್ದರು. ಆದರೆ ಅದಾದ ನಂತರ ಅಂದರೆ 2018ರಲ್ಲಿ ಇಬ್ಬರು ಶಾಸಕರು ಮತ್ತು 14 ಕೌನ್ಸಿಲರ್ ಗಳಿದ್ದರು. 2018ರ ವಿಧಾನಸಭೆ ಚುನಾವಣೆಗೂ ಮುನ್ನ ಬೆಂಗಳೂರು ಶಾಸಕರಾದ ಜಮೀರ್ ಆಹ್ಮದ್ ಮತ್ತು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾದರು,. ಜೆಡಿಎಸ್ ದಾಸರಹಳ್ಳಿ ಮತ್ತು ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೆಲುವು ಸಾಧಿಸಿತ್ತು.
ಆದರೆ ಇತ್ತಿಚೆಗೆ ಗೋಪಾಲಯ್ಯ ಕೂಡ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ 1ಕ್ಕೆ ಇಳಿದಿದೆ.11 ಕೌನ್ಸಿಲರ್ ಗಳು, ಒಬ್ಬರು ರಾಜ್ಯಸಭಾ ಸದಸ್ಯ ಹಾಗೂ ಇಬ್ಬರು ಎಂಎಲ್ ಸಿಗಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos