ತುಮಕೂರು:ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆ ಆರಂಭದಲ್ಲಿ ತೀವ್ರ ಗದ್ದಲ ಉಂಟಾಯಿತು. ಸಂಧಾನದ ನಂತರ ಸಭೆ ಮುಂದುವರಿಯಿತು. ಇತ್ತೀಚೆಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಮತ್ತು ಸದಸ್ಯರ ನೇಮಕದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಸಭೆ ಆರಂಭದಲ್ಲಿ ಗದ್ದಲ ಎಬ್ಬಿಸಿದರು. ಅಧ್ಯಕ್ಷೆ ಕವಿತಾ ರಮೇಶ್, ಉಪಾಧ್ಯಕ್ಷ ಶಾಂತಕುಮಾರ್ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಧು ಎಲ್ಲಾ ಸದಸ್ಯರ ಮನವೊಲಿಸಿದರು.
೧೫ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಪ್ರತಿಯೊಬ್ಬ ಸದಸ್ಯರು ತಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧ್ಯಕ್ಷರು ನುಡಿದರು. ಈಗಾಗಲೇ ೧೫ನೇ ಹಣಕಾಸು ಯೋಜನೆಯ ಅನುದಾನ ಮಂಜೂರಾಗಿದೆ. ಇದಕ್ಕೆ ಸರ್ಕಾರದಿಂದ ೧೦ರಿಂದ ೧೫ ದಿನಗಳೊಳಗೆ ಅನುಮೋದನೆ ದೊರೆಯಲಿದೆ ಎಂದರು.
ಈಗ ಮಂಜೂರಾಗಿರುವ ಅನುದಾನದಲ್ಲಿ ಯಾವ ಶಾಲೆ ಬಳಿ ಶೌಚಾಲಯ ಹಾಳಾಗಿವೆ ಅವುಗಳನ್ನು ದುರಸ್ತಿ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಉಪಾಧ್ಯಕ್ಷ ಶಾಂತಕುಮಾರ್ ತಿಳಿಸಿದರು. ತಾ.ಪಂ ಇಒ ಜೈಪಾಲ್, ಹಣಕಾಸು ಅಧಿಕಾರಿ ಆದಿಲಕ್ಷ್ಮಮ್ಮ ಪಾಲ್ಗೊಂಡಿದ್ದರು.