Bjp ಗೆ ಸೇರ್ಪಡೆಯಾದ ಜನಾರ್ಧನ ರೆಡ್ಡಿ

Bjp ಗೆ ಸೇರ್ಪಡೆಯಾದ ಜನಾರ್ಧನ ರೆಡ್ಡಿ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಆರ್‌ಪಿಪಿ  ಎಂಬ ಪಕ್ಷ ಕಟ್ಟಿ ಸಿಂಗಲ್ ಆಗಿ ಗೆದ್ದಿದ್ದ ನಾಯಕ ಗಾಲೀ ಜನರ್ಧಾನ ರೆಡ್ಡಿ. ಯಾಕಂದ್ರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜನಾರ್ಧನ ರೆಡ್ಡಿಯನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಆದ್ರೆ ಈಗ ಬಳ್ಳಾರಿ ಗಣಿಧಣಿ ಮರಳಿ ಗೂಡು ಸೇರೋದಕ್ಕೆ ಸಜ್ಜಾಗಿದ್ದು ಇವತ್ತು ಕೇಸರಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇಂದು ಬಿಜೆಪಿಗೆ ವಾಪಸಾದರು. ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀ ಹಾಗೂ ಬೆಂಬಲಿಗರು ಕಮಲ ಪಕ್ಷ ಸೇರಿದರು. ಜನಾರ್ದನ ರೆಡ್ಡಿ ಅವರಿಗೆ ಪಕ್ಷದ ಶಾಲು ಹಾಕಿ, ಧ್ವಜ ನೀಡಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು, ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್, ಸಂಸದ ದೇವೇಂದ್ರಪ್ಪ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಪಕ್ಷ ಸೇರ್ಪಡೆಗೂ ಮುನ್ನ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬಸ್ಥರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಫ್ರೆಶ್ ನ್ಯೂಸ್

Latest Posts

Featured Videos