ಬಾಗಲಕೋಟೆ, ಅ. 23 : ಡಿಕೆಶಿಗೆ ಜಾಮೀನು ಸಿಕ್ಕಿದ್ದು ಬಹಳ ಸಂತೋಷ ಉಂಟುಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಬೇಲ್ ಸಿಕ್ಕ ವಿಚಾರದ ಬಗ್ಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಂಗರಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, 7 ಬಾರಿ ಶಾಸಕರಾಗಿದ್ದವರು. ಜಾಮೀನು ಸಿಗಬೇಕಿತ್ತು. ಇಡಿ ಕೋರ್ಟ್ ಇಂದಲೇ ಅವ್ರಿಗೆ ಜಾಮೀನು ಕೊಡಬೇಕಾಗಿತ್ತು, ಆದ್ರೆ ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಿದೆ. ನ್ಯಾಯ ಸಿಕ್ಕಿದೆ ಅನ್ನೋದೇ ಸಂತೋಷ ಎಂದಿದ್ದಾರೆ.
ಕೋರ್ಟ್ನಲ್ಲಿ ತಪ್ಪಿತಸ್ಥ ಅಂತಾ ತೀರ್ಮಾನ ಆದ ಮೇಲೆ ಜೈಲಿಗೆ ಹೋಗಲಿ. ತನಿಖೆ ಮಾಡ್ಲೀ, ಆದ್ರೆ ತನಿಖಾ ಹಂತದಲ್ಲೇ ಜೈಲಿಗೆ ಕಳಿಸೋದು ಸರಿಯಾದ ಕ್ರಮವಲ್ಲ. ಇದು ದ್ವೇಷದ ರಾಜಕಾರಣ, ಯಾವತ್ತು ಒಳ್ಳೆಯದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಬರುತ್ತೆ, ಹೋಗುತ್ತೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.