ಬೆಂಗಳೂರು: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾದ ಬೌಲರ್ಗಳ ಎದುರು ತತ್ತರಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು ರವೀಂದ್ರ ಜಡೇಜಾ ಶತಕ ಗಳಿಸಲು ವಿಫಲರಾಗಿದ್ದಾರೆ. ರವೀಂದ್ರ ಜಡೇಜಾ ಅವರು 87 ರನ್ ಬಾರಿಸಿ ಅರೆಕಾಲಿಕ ಸ್ಪಿನ್ನರ್ ಜೋ ರೂಟ್ ಅವರಿಗೆ ಎಲ್ ಬಿಡಬ್ಲ್ಯು ರೂಪದಲ್ಲಿ ವಿಕೆಟ್ ಒಪ್ಪಿಸಿದರು. ಅವರು ತಮ್ಮ ಇನ್ನಿಂಗ್ಸ್ನಲ್ಲಿ 7 ಬೌಂಡರಿಗಳು ಮತ್ತು 2 ಸಿಕ್ಸರ್ಗಳನ್ನು ಬಾರಿಸಿದ್ದರು. ಆದರೆ, ಶತಕದ ಕಡೆಗೆ ಸಾಗುತ್ತಿದ್ದ ಅವರು ಯಾಮಾರಿ ಔಟಾದರು.
ರವೀಂದ್ರ ಜಡೇಜಾ ಅವರ ಔಟ್ ವಿವಾದಾತ್ಮಕವಾಗಿತ್ತು. ಇದು ಟ್ವಿಟರ್ ನಲ್ಲಿ ಅಭಿಮಾನಿಗಳ ಕೋಪ ಕಾಣಿಸಿಕೊಂಡಿತು. ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ನಿರ್ಧಾರದಿಂದ ಅಭಿಮಾನಿಗಳು ನಿರಾಶರಾದರು. ತೀರ್ಪು ಪರಾಮರ್ಶೆ ಮಾಡಿದಾಗಲೂ ಚೆಂಡು ವಿಕೆಟ್ಗೆ ಸಂಪೂರ್ಣವಾಗಿ ಬಡಿಯುವುದು ಕಂಡು ಬರಲಿಲ್ಲ. ಚೆಂಡು ಬೇಲ್ಸ್ಗಿಂತ ಸಾಕಷ್ಟು ಎತ್ತರಕ್ಕೆ ತಾಗುತ್ತಿತ್ತು. ಡಿಆರ್ಎಸ್ ಕೂಡ ಆನ್ಫೀಲ್ಡ್ ಅಂಪೈರ್ ತೀರ್ಪನ್ನು ಬೆಂಬಲಿಸಿತು. ಹೀಗಾಗಿ ರವೀಂದ್ರ ಜಡೇಜಾ ಮೈದಾನ ತೊರೆಯಬೇಕಾಯಿತು. ಆದಾಗ್ಯೂ, ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ವಿವಾದಾತ್ಮಕ ನಿರ್ಧಾರದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲವಾದರು.