ಇತಿಹಾಸ ಸೃಷ್ಟಿಸಿದ ಜಡೇಜಾ!

ಇತಿಹಾಸ ಸೃಷ್ಟಿಸಿದ ಜಡೇಜಾ!

ಬೆಂಗಳೂರು: ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ ಸ್ಪಿನ್ನರ್​ಗಳು ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ಟೀ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿದೆ. ಆಂಗ್ಲ ಬ್ಯಾಟರ್​ಗಳಿಗೆ ದುಸ್ವಪ್ನವಾಗಿ ಕಾಡಿದ ಸ್ಪಿನ್ ತ್ರಿವಳಿಗಳಾದ ರವೀಂದ್ರ ಜಡೇಜಾ, ಆರ್​ ಅಶ್ವಿನ್, ಅಕ್ಷರ್ ಪಟೇಲ್ ಕ್ರಮವಾಗಿ 3, 2, 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ದಿನದಾಟದ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಆಂಗ್ಲರಿಗೆ ಆರಂಭಿಕ ಆಘಾತ ನೀಡಿದ ಜಡೇಜಾ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 550 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos