‘ಜಾಧವ್’ ಗೆ ವಿಶ್ ಮಾಡಿದ ಜಾರಕಿಹೊಳಿ

‘ಜಾಧವ್’ ಗೆ ವಿಶ್ ಮಾಡಿದ ಜಾರಕಿಹೊಳಿ

ಬೆಂಗಳೂರು, ಮೇ. 27, ನ್ಯೂಸ್ಎಕ್ಸ್ ಪ್ರೆಸ್‍:   ಸಚಿವ ಸಂಪುಟ ವಿಸ್ತರಣೆ ಬಳಿಕ ನಿಗೂಢ ನಡೆ ಅನುಸರಿಸುತ್ತಿರುವ ರಮೇಶ್‌ ಜಾರಕಿಹೊಳಿ ನನಗೆ ವಿಶ್ ಮಾಡಲು ಬಂದಿದ್ದರು  ಅಂತಾ  ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.

ಇಲ್ಲಿನ ವಿಧಾನಸೌಧದಲ್ಲಿ ಮಾತನಾಡಿದ ಅವರು,‘’ನಾನು ದೆಹಲಿಗೆ ಹೋಗಿ ಈಗಷ್ಟೇ ಬೆಂಗಳೂರಿಗೆ ಬಂದಿದ್ದೇನೆ. ಇಲ್ಲಿ ಏನು ನಡೆಯುತ್ತಿದೆಯೋ ಗೊತ್ತಿಲ್ಲ.  ನಾನು ಪಕ್ಷದ ಜವಾಬ್ದಾರಿಗೆ ಬದ್ಧನಾಗಿದ್ದೇನೆ. ಕೇಂದ್ರ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದಿದ್ದಾರೆ. ಇಂದು ಸಿಎಂ ಹೆಚ್​.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು,  ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆಯಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos