ಎದುರಾಳಿಗೆ ನಡುಕ ಹುಟ್ಟಿಸಿದ ಜನರಲ್ ಬಿಪಿನ್ ರಾವತ್

ಎದುರಾಳಿಗೆ ನಡುಕ ಹುಟ್ಟಿಸಿದ ಜನರಲ್ ಬಿಪಿನ್ ರಾವತ್

ಹೊಸದಿಲ್ಲಿ, ಅ. 14:  ಭಾರತವು ಮುಂದಿನ ಯುದ್ಧವನ್ನು ದೇಶೀಯ ತಂತ್ರಜ್ಞಾನದಿಂದಲೇ ತಯಾರಿಸಲಾದ  ಶಸ್ತ್ರಾಸ್ತ್ರಗಳಿಂದಲೇ ಗೆಲ್ಲಲಿದೆ ಎಂದು ಭೂಸೇನಾ ಮುಖ್ಯಸ್ಥ  ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ 41ನೇ ನಿರ್ದೇಶಕರ ಸಮ್ಮೇಳನದಲ್ಲಿ ಮಾತನಾಡಿದರು, ಭಾರತಕ್ಕಿರುವ ಭವಿಷ್ಯದ ಯುದ್ಧದ ಅಪಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಯುದ್ಧಾಸ್ತ್ರಗಳು ಮತ್ತು ಇತರೆ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಿ ಭಾರತವು ಮುಖಾಮುಖಿ ಯುದ್ಧ ಮಾಡುವುದಿಲ್ಲ. ಬದಲಿಗೆ ಅತ್ಯಾಧುನಿಕ ಯುದ್ಧತಂತ್ರಗಳನ್ನು ಪ್ರಯೋಗ ಮಾಡಲಿದೆ. ಇದಕ್ಕಾಗಿ ಬಾಹ್ಯಾಕಾಶ, ಲೇಸರ್, ವಿದ್ಯುನ್ಮಾನ ತಂತ್ರಗಳು, ರಾಬಾಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಕುರಿತು ಪ್ರಸ್ತುತದಲ್ಲಿ ಯೋಚಿಸದಿದ್ದರೆ ಮುಂದು ತಡವಾಗಿಬಿಡುತ್ತದೆ ಎಂದು ಹೇಳಿದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos