ಚಿಕ್ಕಬಳ್ಳಾಪುರ, ಡಿ. 19: ನಮ್ಮ ಸಮಾಜದಲ್ಲಿ ನಾ ಮೇಲು ನೀ ಮೇಲು ಎಂದು ತಮ್ಮ ತಮ್ಮ ಜಾತಿಯ ಬಗ್ಗೆ ಕತ್ತಾಡೋರುಂಟು. ಆದರೆ ಚಿಕ್ಕಬಳ್ಳಾಪುರದಲ್ಲಿ ಅಂತರ್ ಧರ್ಮೀಯ ವಿವಾಹ ನಡೆದಿದ್ದು, ಸೌಹಾರ್ದತೆ ಮೆರೆದಿರುವ ಘಟನೆ ನಡೆದಿದೆ.
ಹೌದು, ಹಿಂದೂ ಯುವಕನ ಜೊತೆಯಲ್ಲಿ ಮುಸ್ಲಿಂ ಯುವತಿಯೋರ್ವಳು ಸಪ್ತಪದಿ ತುಳಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರಿನಲ್ಲಿ ನಡೆದಿದೆ.
ಗೌರಿ ಬಿದನೂರಿನ ಉಪ್ಪಾರ ಕಾಲೋನಿ ನಿವಾಸಿಯಾದ ಮಂಜುನಾಥ್ ಜೊತೆ ಇದೇ ಬಡಾವಣೆಯಲ್ಲಿ ವಾಸವಾಗಿದ್ದ ಸುಹಾನ ಹಸೆಮಣೆ ಏರಿದ್ದಾರೆ.
ಚಿಕ್ಕಬಳ್ಳಾಪುರದ ಪ್ರಮುಖ ಐತಿಹಾಸಿಕ ಪ್ರದೇಶ ಎಂದು ಕರೆಸಿಕೊಳ್ಳುವ ವಿದುರಾಶ್ವತ್ಥದ ದೇವಾಲಯದಲ್ಲಿ ಇಲ್ಲಿನ ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ ನೇತೃತ್ವದಲ್ಲಿ ವಿವಾಹ ಕಾರ್ಯ ನೆರವೇರಿದೆ.