ನೆಪ್ರೋ ಯುರಾಲಾಜಿ ನಿರ್ದೇಶಕರ ವಿರುದ್ದ ತನಿಖೆ ಆರಂಭ..!

ನೆಪ್ರೋ ಯುರಾಲಾಜಿ ನಿರ್ದೇಶಕರ ವಿರುದ್ದ ತನಿಖೆ ಆರಂಭ..!

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿರುವ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ನೆಪ್ರೋ ಯುರಾಲಾಜಿ ಆಸ್ಪತ್ರೆಯಲ್ಲಿ ನಿರ್ದೇಶಕ ಡಾ. ಕೇಶವಮೂರ್ತಿಯವರದೇ ಹಾವಳಿಯಾಗಿದ್ದು ಇವರ ವಿರುದ್ಧ ಈಗಾಗಲೇ ಹಲವಾರು ಸಾರ್ವಜನಿಕರು ದೂಗು ದಾಖಲಿಸಿದ್ದು, ದೂರು ದಾಖಲೆಯ ಮೇರೆಗೆ ಇದೀಗ ಡಾ. ಕೇಶವಮೂರ್ತಿ ಅವರ ವಿರುದ್ಧ ತನಿಕೆಗೆ ಸೂಚನೆ ನೀಡಲಾಗಿದೆ.

ಹೌದು, ಬೆಂಗಳೂರು ನಗರದಲ್ಲಿರುವ ನೆಪ್ರೋ ಯುರಾಲಾಜಿ ನಿರ್ದೇಶಕ ಡಾ. ಕೇಶವಮೂರ್ತಿಯವರ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಯವರು ತನಿಖೆಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮಹಮ್ಮದ್ ಮೊಸಿನ್ ರವರಿಗೆ ತಕ್ಷಣ ವರದಿ ನೀಡಿ ತನಿಖೆ ನಡೆಸುವಂತೆ ಇಂದು (ಶುಕ್ರವಾರ ಆಗಸ್ಟ್ 23) ರಂದು ಸೂಚನೆ ನೀಡಲಾಗಿದೆ.

ರಾಜ್ಯ ದಲಿತ ಸೇವಾ ಸಂಘದ ರಾಜ್ಯಾಧ್ಯಕ್ಷ ಜೆ ಚಂದ್ರಪ್ಪ ಅವರ ದೂರಿನ ಮೇರೆಗೆ ಆಸ್ಪತ್ರೆ ನೆಪ್ರೋ ಯುರಾಲಾಜಿ ವಿಭಾಗದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರ ದೂರು ಬಂದಿರುವ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕೂಡಲೇ ಸಂಸ್ಥೆಯಲ್ಲಿ ನಡೆಯುತ್ತಿರುವ ಎಲ್ಲಾ ಅಂಶಗಳನ್ನು ಕೂಡಿರುವಂತಹ ವರದಿಯನ್ನು ನೀಡಬೇಕೆಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ  ಸೂಚಸಿದ್ದಾರೆ.

ಹಿನ್ನೆಲೆ:

ದೇಶದ ಪ್ರತಿಷ್ಠಿತ ನೆಪ್ರೋ ಯುರಾಲಾಜಿ ಸಂಸ್ಥೆಯಲ್ಲಿ ಕಳೆದ 8 ವರ್ಷಗಳಿಂದ ಪ್ರಭಾರ ಹುದ್ದೆಯಲ್ಲಿರುವ ಸಂಸ್ಥೆಯ ನಿರ್ದೇಶಕರ ಅಕ್ರಮಗಳಿಂದಾಗಿ ಆರೋಪಗಳನ್ನು ಹೊದ್ದು ಮಲಗಿದೆ. ಈ ಸಂಸ್ಥೆಗೆ ಸಂಬಂಧಿಸಿದ ಅನೇಕ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿ ಇನ್ನೂ ವಿಚಾರಣ ಹಂತದಲ್ಲಿವೆ. ಕಾರಣವೇನೆಂದರೆ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ.ಕೇಶವಮೂರ್ತಿ  ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಹಾಗೂ ಅಕ್ರಮ ಬಡ್ತಿ  ಆರೋಪಗಳು ಸಾಬೀತಾಗಿವೆ. ಇದನ್ನೂ ಓದಿ: ಅಂಕಪಟ್ಟಿಗೆ ಹಣ ಪಡೆಯುತ್ತಿದ್ದ ಆರೋಪಿಗೆ ಬಲೆ ಬೀಸಿದ ಪೊಲೀಸರು

ಅಂದರೆ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಾಜಿ ಸಂಸ್ಥೆ ದೇಶದ ಅತಿ ಎರಡನೇ ದೊಡ್ಡ ಕಿಡ್ನಿ ಗುಣಪಡಿಸುವ ಸರಕಾರಿ ಸಂಸ್ಥೆಯಾಗಿದೆ. ಇಲ್ಲಿ ನಿತ್ಯ 300ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ದಿನಕ್ಕೆ 20ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳು ನಡೆಯುತ್ತವೆ. ಆದರೆ ಕಳೆದ 8 ವರ್ಷಗಳಿಂದ ಸಂಸ್ಥೆಯಲ್ಲಿ ಸಿಬ್ಬಂದಿ ನೇಮಕ ಅಕ್ರಮ, ಕಾನೂನು ಬಾಹಿರ ಸೇವಾ ಬಡ್ತಿ, ಭ್ರಷ್ಟಾಚಾರ ಹಾಗೂ ದುರಾಡಳಿತಗಳಿಂದ ದುರಾವಸ್ಥೆ ಶುರುವಾಗಿತ್ತು.

ವೈದ್ಯರು ಕರ್ತವ್ಯ ಸಮಯದಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದು, ಇದಕ್ಕೆ ಸಂಸ್ಥೆಯ ಪ್ರಭಾರಿ ನಿರ್ದೇಶಕರೇ ಪರೋಕ್ಷ ಬೆಂಬಲ ನೀಡುತ್ತಿರುವ ಆರೋಪಗಳಿತ್ತು. ಅಷ್ಟಕ್ಕೂ ಇಲ್ಲಿನ ಪ್ರಭಾರಿ ನಿರ್ದೇಶಕರು ೮ ವರ್ಷಗಳಿಂದಲೂ ಪ್ರಭಾರಿಯಾಗಿದ್ದಾರೆ. (ನಿಯಮದ ಪ್ರಕಾರ ಪ್ರಭಾರಿ ಅವಧಿ ೬ ತಿಂಗಳು ಮಾತ್ರ) ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಪಿ.ಆರ್.ರಮೇಶ್, ರವಿ ಸುಬ್ರಮಣ್ಯ ಹಾಗೂ ರಾಮಚಂದ್ರ ಗುಹಾ  ಮತ್ತು ಆಸ್ಪತ್ರೆ ಮಹಿಳಾ ವೈದ್ಯರು ಸೇರಿದಂತೆ ಅನೇಕರು ಸರಕಾರಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಸಂಸ್ಥೆಯ ಪ್ರಭಾರಿ ನಿರ್ದೇಶಕರ ವಿರುದ್ಧದ ಅಕ್ರಮಗಳ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿತ್ತು.

ಆದರೆ ಆಸ್ಪತ್ರೆ ಅಕ್ರಮಗಳ ವಿರುದ್ಧದ ಲೋಕಾಯುಕ್ತ ತನಿಖೆ ನಡೆದು ವರ್ಷಗಳೇ ಕಳೆದಿವೆ. ಆದರೆ ಅದು ಇನ್ನೂ ಸರಕಾರಕ್ಕೆ ಸಲ್ಲಿಕೆಯೇ ಆಗಿಲ್ಲ. ಇಲ್ಲಿ ಆರೋಪಿಗಳು ವರದಿ ಸಲ್ಲಿಕೆಯನ್ನು ವಿಳಂಬ ಮಾಡುವ ನಿಟ್ಟಿನಲ್ಲಿ ಕೈ ಬೆಚ್ಚಗೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ೯ ರೋಗಿಗಳಲ್ಲಿ ನಾಲ್ವರು ಸಾವಿಗೀಡಾಗಿ, ಐವರು ಚಿಂತಾಜನಕವಾಗಿದ್ದ ಪ್ರಕರಣ ಹಾಗೂ ರಾಮನಗರದ ರೋಗಿ ರಂಜಿತ್ ರಾಜ್ ಇನ್ನೂ ಕೋಮಾ ಸ್ಥಿತಿಯಲ್ಲಿರುವ ಪ್ರಕರಣದ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ನೇತೃತ್ವದ ಸಮಿತಿ ತನಿಖೆ ಮಾಡಿ ವರದಿ ಸಲ್ಲಿಸಿದೆ.

ಆದರೆ ವರದಿ ಪ್ರಕಾರ ಯಾವುದೇ ಕ್ರಮ ಜರುಗದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಅಧೀನ ಕಾರ್ಯದರ್ಶಿ ಅವರು ಸಕಾಲಕ್ಕೆ ಕೈ ಬೆಚ್ಚಗೆ ಮಾಡಿಕೊಂಡು ನೋಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಪ್ರಭಾರಿ ನಿರ್ದೇಶಕ ಡಾ. ಕೇಶವಮೂರ್ತಿಯವರ ಅಕ್ರಮಗಳ ಬಗ್ಗೆ ದಿನ ಪತ್ರಿಕೆಗಳು, ಮಾಧ್ಯಮಗಳು ಸುದ್ದಿ ಭಿತ್ತರಿಸಿದರೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿ ಕ್ರಮ ಜರುಗಿಸದೇ ಇರುವುದು ಶೋಚನೀಯ.

ಆದ್ದರಿಂದ ಈ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಅಕ್ರಮಗಳನ್ನು ತಡೆಯಬೇಕು. ಅದಕ್ಕಾಗಿ ಕೂಡಲೇ ಪ್ರಭಾರಿ ನಿರ್ದೇಶಕ ಕೇಶವಮೂರ್ತಿ ಅವರನ್ನು ವಜಾ ಗೊಳಿಸಿ ಅವರ ಸ್ಥಾನಕ್ಕೆ ಅಲ್ಲೇ ಇರುವ ಯಾರಾದರೂ ಹಿರಿಯ ತಜ್ಞರನ್ನು ಆಡಳಿತ ಅನುಭವಿಗಳನ್ನು ನೇಮಕ ಮಾಡಬೇಕೆಂದು ಈ ಮೂಲಕ ತಿಲಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos