ಮೀಸಲಾತಿ ಹೆಚ್ಚಿಸಲು ಒತ್ತಾಯ

ಮೀಸಲಾತಿ ಹೆಚ್ಚಿಸಲು ಒತ್ತಾಯ

 ಬೆಂಗಳೂರು, ಡಿ. 20: ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗ ಗಳಲ್ಲಿ ಈಗಿರುವ ಶೇ.17% ಮೀಸಲಾತಿ ಪ್ರಮಾಣವನ್ನು ನಮ್ಮ ಜನಸಂಖ್ಯೆ ಗೆ ಅನುಗುಣವಾಗಿ ಶೇ. 2೦ ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಡಿ.23 ರಂದು ಬೆಳಗ್ಗೆ 11 ಗಂಟೆಗೆ ಕೆ.ಆರ್ ವೃತ್ತದಲ್ಲಿ ಯವನಿಕಾ  ಸಭಾಂಗಣದಲ್ಲಿ ಸಮಾವೇಶಗೊಂಡು ನ್ಯಾಯಮೂರ್ತಿ  ನಾಗಮೋಹನದಾಸ್ ರವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ.ಸಚಿವ ಹೆಚ್. ಆಂಜನೇಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ ಪ. ಜಾತಿ ವರ್ಗಕ್ಕೆ ಮೀಸಲಾತಿ ನೀಡಲಾಗಿತ್ತು. ಈವರೆಗೂ ಅದೇ ಮಿಸಲು ಪ್ರಮಾಣ ಇದೆ. ಆದರೆ, ಜನಸಂಖ್ಯೆ ಹೆಚ್ಚಾಗಿದ್ದು, ಜನಸಂಖ್ಯೆ ಗೆ ಅನುಗುಣವಾಗಿ ಮೀಸಲಾತಿಯನ್ನು  ಹೆಚ್ಚಿಸಿಲ್ಲ ಆದ್ದರಿಂದ 2೦೦೦ ಹಾಗೂ 2011 ನೇ ಜನಗಣತಿ ಆಧರಿಸಿ ಮೀಸಲನ್ನು ಹೆಚ್ಚಿಸಬೇಕು.

ಮುಖಂಡರು ಈಗಾಗಲೇ ಸಮುದಾಯದ ಜನಸಂಖ್ಯೆ ಮತ್ತಿತರರ ಮಾಹಿತಿಯನ್ನ  ಸಂಶೋಧಿಸಿ  ಸಂಗ್ರಹಿಸಲಾಗಿದೆ. ವರದಿಯನ್ನು 23 ರಂದು ನ್ಯಾ. ನಾಗಮೋಹನ ದಾಸವರರಿಗೆ ಸಲ್ಲಿಸಲಾಗುವುದು ಈ ವೇಳೆ ರಾಜ್ಯದಾದ್ಯಂತ ದಲಿತ ಮುಖಂಡರು ಪಾಲ್ಗೊಳ್ಳಲಿದ್ದರೆ ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಿಸುವ ಜತೆಗೆ, ಖಾಸಗಿ ವಲಯದ ಶಿಕ್ಷಣ ಹಾಗೂ ಉದ್ಯೋಗಗಳಿಗೂ ಇದೇ ಮೀಸಲಾತಿ ನೀಡಬೇಕು, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಮೀಸಲಾತಿ ದುರುಪಯೋಗ ಪಡಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಸಮುದಾಯದ ನಾಯಕ ಡಾ.ಸಿದ್ದಲಿಂಗಯ್ಯ, ಡಾ ಎಲ್ .ಹನುಂಮತಯ್ಯ, ಮಾವಳ್ಳಿ ಶಂಕರ್, ಎಂ ವೆಂಕಟಸ್ವಾಮಿ, ಎಂ ಜಯಣ್ಣ, ನಾಗವಾರ ಮೋಹನರಾಜು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos