ಪ್ರಪ್ರಥಮವಾಗಿ ಪತ್ರಕರ್ತರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು

ಪ್ರಪ್ರಥಮವಾಗಿ ಪತ್ರಕರ್ತರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು

ತುಮಕೂರು, ಅ. 13: ತಿಪಟೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಾಲೂಕಿನ ಹಿರಿಯ ವರದಿಗಾರರಾದ ಶ್ರೀ ಹಳ್ಳಿ ಸುರೇಶ್ ಅವರಿಗೆ ನುಡಿ ನಮನ ಕಾರ್ಯಕ್ರಮ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಅವರು ಹಳ್ಳಿ ಸುರೇಶ್ ಅವರ ಬಗ್ಗೆ ನುಡಿ ನಮನಗಳನ್ನು ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀಯುತ ಭೃಂಗೇಶ್ವರವರು ಭಾಗವಹಿಸಿದ್ದರು. ಶ್ರೀಯುತರು ಮಾತನಾಡುತ್ತಾ ಕರ್ನಾಟಕ ಸರ್ಕಾರದಲ್ಲಿ ಪತ್ರಕರ್ತರಿಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ವಿವರಗಳನ್ನುತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಚೀನಿ ಪುರುಷೋತ್ತಮ್ ಅವರು ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀ ರಂಗಸ್ವಾಮಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ದಂಡ ಗ್ರಾಮೀಣ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್ ನಾಗರಾಜು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ತಿಪಟೂರು ಕೃಷ್ಣ ರಘುರಾಮ್ ಹಾಗೂ ಸಿ. ರಂಗನಾಥ್ ರವರುತಿಪಟೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯದರ್ಶಿಯಾದ ಶ್ರೀಹಾಲ್ಕುರಿಕೆ ಮಂಜುನಾಥ್,  ತಾಲ್ಲೂಕು  ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ. ಮಹೇಶ್ . ಹಾಗೂತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೀಶ್ ಭಾಗವಹಿಸಿದ್ದರು.  ಇತರರು  ಭಾಗವಹಿಸಿದ್ದರು. ಶ್ರೀಯುತ ದಿವಂಗತ ಹಳ್ಳಿ ಸುರೇಶ್ ಅವರ ಸ್ವಗೃಹಕ್ಕೆ ಭೇಟಿನಿಡಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ಹಾಗೂ ತುಮಕೂರು ಜಿಲ್ಲಾ ಘಟಕ ಮತ್ತು ತಿಪಟೂರು ತಾಲ್ಲೂಕು ಘಟಕ ಹಾಗೂ ಸಹೋದ್ಯೋಗಿ ಮಿತ್ರರು ಸೇರಿ  ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಹಳ್ಳಿ ಸುರೇಶ್ ಅವರ ಧರ್ಮಪತ್ನಿ  ಶ್ರೀಮತಿ ಕಲಾರವರಿಗೆ ಮತ್ತು ಕುಟುಂಬದವರಿಗೆ ನೀಡಲಾಯಿತು.  ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಹಾಗೂ  ಹಾಸನ ಜಿಲ್ಲೆಯ ಪತ್ರಕರ್ತರು ಹಾಗೂ ಹಿತೈಷಿಗಳು ಸ್ನೇಹಿತರುಗಳು ತಿಪಟೂರು ತಾಲ್ಲೂಕಿನ ಎಲ್ಲ ಪತ್ರಕರ್ತ ಸಹೋದ್ಯೋಗಿಗಳು  ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos