ಪಾವಗಡ: ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿ ಸಹಯೋಗದಲ್ಲಿ ಪಾವಗಡ ಪಟ್ಟಣದ ಎಲ್ಲ ಆಟೋ ರಿಕ್ಷಾಗಳಿಗೆ ಕೊರೋನಾ ವೈರಸ್ ತಡೆಗಟ್ಟುವಿಕೆಯ ಯೋಜನೆ ಹಮ್ಮಿಕೊಳ್ಳಲಾಗಿತ್ತು.
ನೈರ್ಮಲೀಕರಣ ಮತ್ತು ಕ್ರಿಮಿನಾಶಕ ಯೋಜನೆ ಅಡಿಯಲ್ಲಿ ಆಟೋ ರಿಕ್ಷಾಗಳಿಗೆ ಪ್ರತಿ ವಾರದಂತೆ ಸೋಂಕು ನಿವಾರಕ ಔಷದ ಸಿಂಪಡಿಸುವ ಕಾರ್ಯಕ್ಕೆ ಶ್ರೀ ಜಪಾನಂದ ಮಹಾರಾಜ್ ಹಾಗು ತಿರುಮಣಿ ಆರಕ್ಷಕ ವೃತ್ತ ನಿರೀಕ್ಷರಾದ ವೆಂಕಟೇಶ್ ಔಷದ ಸಿಂಪಡಿಸುವ ಮೂಲಕ ಚಾಲನೆ ನೀಡಲಾಯಿತು
ಆಟೋ ರಿಕ್ಷಾಗಳಿಗೆ ಔಷದಿ ಸಿಂಪಡಿಸುವ ಮೂಲಕ ಚಾಲನೆ ಕೊಟ್ಟು ಮಾತನಾಡಿದ ಆರಕ್ಷಕ ವೃತ್ತ ನಿರೀಕ್ಷಕರಾದ ವೆಂಕಟೇಶ್ ರವರು ಮಾತನಾಡುತ್ತ ಸ್ವಾಮೀಜಯವರ ಸಾಮಾಜಿಕ ಕಾರ್ಯಗಳನ್ನು ಮುಕ್ತ ಕಂಠದಿಂದಶ್ಲಾಘಿಸಿದರು.
ನಂತರ ಆಟೋ ಚಾಲಕರನ್ನು ಉದ್ದೇಶಿಶಿ ಮಾತನಾಡಿದ ಶ್ರೀಗಳು ತಾವುಗಳು ಆಟೋ ಚಾಲಕರ ಅರೋಗ್ಯ ದೃಷ್ಟಿಯಿಂದ ಪ್ರಯಾಣಿಕರಿಗೆ ಮಾಸ್ಕ ಗಳನ್ನೂ ಹಾಕಿ ಕೊಂಡು ಪ್ರಯಾಣಿಸುವಂತೆ ಮನವಿ ಮಾಡಿಕೊಳ್ಳುವಂತೆ ಕರೆ ನೀಡಿದರು.