ಭಾರತದ ಮೊದಲ ಉಗ್ರ ಹಿಂದೂ: ಕಮಲ್

ಭಾರತದ ಮೊದಲ ಉಗ್ರ ಹಿಂದೂ: ಕಮಲ್

ನವದೆಹಲಿ, ಮೇ.13, ನ್ಯೂಸ್ ಎಕ್ಸ್ ಪ್ರೆಸ್: ನಟ ಕಮಲಹಾಸನ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರತದ ಮೊದಲ ಉಗ್ರ ಒಬ್ಬ ಹಿಂದೂ. ಆತನೇ ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

ಮೇ. 19ರಂದು ಅರವಕುರುಚ್ಚಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ನೂತನ ಎಂಎನ್ಎಂ ಪಕ್ಷದ ಅಭ್ಯರ್ಥಿ ಪರ ನಡೆಸಲಾದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ ಹಾಸನ್ ಭಾಷಣ ಮಾತನಾಡುತ್ತಿದ್ದ ರು.

ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ತಾವು ಮುಸ್ಲಿಮರನ್ನು ಓಲೈಸಲು ಇದನ್ನು ಹೇಳುತ್ತಿಲ್ಲ. ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಇದನ್ನು ಹೇಳಿದ್ದೇನೆ ಎಂದಿದ್ದಾರೆ.

ಈ ಮೊದಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಎಂಬ ಆರೋಪ ಮಾಡಿದ್ದರ ಮಧ್ಯೆ, ಕಮಲ್ ಅವರ ಈ ಹೇಳಿಕೆ ಮತ್ತೆ ವಿವಾದ ಪಡೆದುಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos