ಭಾರತಕ್ಕೆ ಜಯ : ಇಶಾಂತ್ ಗೆ ಪಂದ್ಯ ಶ್ರೇಷ್ಠ

ಭಾರತಕ್ಕೆ ಜಯ : ಇಶಾಂತ್ ಗೆ ಪಂದ್ಯ ಶ್ರೇಷ್ಠ

ಕೋಲ್ಕತ್ತಾ, ನ.  24 : 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್ಸ್ವೀಪ್ ಮಾಡಿಕೊಂಡಿದೆ.
2ನೇ ದಿನ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದ್ದ ಬಾಂಗ್ಲಾ ಇಂದು ತನ್ನ ಖಾತೆಗೆ 4 ವಿಕೆಟ್ಗಳ ಸಹಾಯದಿಂದ 43 ರನ್ ಸೇರಿಸಿ 41.1 ಓವರ್ ಗಳಲ್ಲಿ 195 ರನ್ಗಳಿಗೆ ಆಲೌಟ್ ಆಯ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ 5 ವಿಕೆಟ್ ಕಿತ್ತರು. ಈ ಪಂದ್ಯದಲ್ಲಿ 9 ವಿಕೆಟ್ ಕಿತ್ತ ಇಶಾಂತ್ ಶರ್ಮಾ ಪಂದ್ಯಶ್ರೇಷ್ಠ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬಾಂಗ್ಲಾ ಪರ ಆಲ್ ಅಮಿನ್ ಹುಸೇನ್ 21 ರನ್ ಗಳಿಸಿದರು. 6 ಬಾಂಗ್ಲಾ ಆಟಗಾರರು ಎರಡನೇ ಇನ್ನಿಂಗ್ಸ್ನಲ್ಲಿ ಎರಡಂಕಿ ದಾಟುವಲ್ಲಿ ವಿಫಲರಾದರು.
ಎರಡು ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ 360 ಅಂಕಗಳಿಸಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ. ಟೆಸ್ಟ್ ಚಾಂಪಿಯನ್ಶಿಪ್ ಆರಂಭಗೊಂಡ ಬಳಿಕ ಇಲ್ಲಿಯವರೆಗೆ 7 ಪಂದ್ಯಗಳು ನಡೆದಿದ್ದು ವಿಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾ ತಂಡವನ್ನು ಸೋಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ. 6 ಪಂದ್ಯವಾಡಿ 3 ಪಂದ್ಯ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡಿರುವ ಆಸ್ಟ್ರೇಲಿಯಾ 116 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos