ವೈಜಾಗ್, ಡಿ. 18: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಭಾರತ ಇಂದು ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. 3 ಪಂದ್ಯಗಳ ಸರಣಿ ಇದಾಗಿರುವುದರಿಂದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಆದುದರಿಂದ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
2ನೇ ಪಂದ್ಯದಲ್ಲಿ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಕೊಹ್ಲಿ ಪಡೆ ನೆಟ್ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದು, ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಕೈಯಿಂದ ಬೌಲಿಂಗ್ ಮಾಡಿಸಿಕೊಂಡಿದೆ.
ಬೌಲರ್ ಭುವನೇಶ್ವರ್ ಕುಮಾರ್ ಈ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ, ಬೌಲರ್ಗಳ ಅಗತ್ಯತೆ ಟೀಂ ಇಂಡಿಯಾಗೆ ಅತ್ಯಧಿಕವಾಗಿದ್ದು, ಶಿವಮ್ ಡುಬೆ ಇಂದು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅವರು ಫೀಲ್ಡ್ಗೆ ಇಳಿದರೆ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಭಾರತಕ್ಕೆ ಬಲ ಸಿಗಲಿದೆ.
ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ಇರುವುದು 7ನೇ ಸ್ಥಾನದಲ್ಲಿ. ಆದಾಗ್ಯೂ, ತನ್ನದೇ ನಾಡಿನಲ್ಲಿ ವಿರಾಟ್ ಕೊಹ್ಲಿಗೆ ಸರಣಿ ಸೋಲುವ ಭಯ ಎದುರಾಗಿದೆ. ಒಂದೊಮ್ಮೆ ಇಂದಿನ ಪಂದ್ಯ ಸೋತರೆ ಭಾರತಕ್ಕೆ ಸರಣಿ ಕೈ ತಪ್ಪಲಿದೆ. ಹೀಗಾಗಿ ಕೊಹ್ಲಿ ಪಡೆಗೆ ಇಂದಿನದ್ದು ಮಾಡು ಇಲ್ಲವೆ ಮಡಿ ಪಂದ್ಯ.