ನ್ಯೂಸ್ ಎಕ್ಸ್ ಪ್ರೆಸ್, ಮಾ.30: ತೂಕ ಹೆಚ್ಚಿಸಿಕೊಂಡು ತಾವು ಚೆನ್ನಾಗಿ ಕಾಣಬೇಕು ಎಂದು ತೆಳ್ಳಗಿರುವವರಿಗೆ ಬಹಳ ಆಸೆ. ಇದಕ್ಕೆ ಕೆಲವರು ಏನೆಲ್ಲ ಕಸರತ್ತು ಮಾಡುತ್ತಾರೆ, ಜಂಕ್ ಫುಡ್, ಫಾಸ್ಟ್‌ಫುಡ್ ಗಳನ್ನು ವಿಪರೀತವಾಗಿ ತಿನ್ನುತ್ತಾರೆ, ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಔಷಧಗಳು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವಗಳು ಬೀರುವ ಸಾಧ್ಯತೆಗಳು ಕೂಡ ಅಧಿಕವಾಗಿದೆ. ಆದ್ದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿಮ್ಮ ದೇಹದ ತೂಕವನ್ನು ಹೆಚ್ಚಿಸಬೇಕೆ? ಈ ಕೆಳಗಿನ ವಿಧಾನವನ್ನು ಅನುಸರಿಸಿ…
ಕಡ್ಲೆಬೀಜ; ನೀವು ಪ್ರತೀದಿನ ಕಡ್ಲೆಬೀಜವನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನಬೇಕು. ಹೀಗೆ ಒಂದು ತಿಂಗಳು ತಿನ್ನುವುದರಿಂದ ನಿಮ್ಮ ಶರೀರದ ತೂಕ ಹೆಚ್ಚುವುದು.
ಒಣದ್ರಾಕ್ಷಿ: ಪ್ರತಿದಿನ ತೆಂಗಿನಕಾಯಿ ತುರಿಗೆ ಒಣದ್ರಾಕ್ಷಿ ಸೇರಿಸಿ ತಿಂದರೆ ಒಂದು ತಿಂಗಳೊಳಗೆ ಮೈಕೈ ತುಂಬಿಕೊಳ್ಳುತ್ತದೆ.
ಬಾಳೆಹಣ್ಣು: ದಿನಾ ಎರಡು ಬಾಳೆಹಣ್ಣು ತಿಂದು ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ನಂತರ ಎರಡು ಚಮಚ ಒಣದ್ರಾಕ್ಷೆ ತಿಂದು ಎರಡು ಏಲಕ್ಕಿ ತಿಂದರೆ ತೂಕ ಹೆಚ್ಚಾಗುವುದು.
ಬಾರ್ಲಿ ಪಾಯಸ: ಬಾರ್ಲಿಯನ್ನು ಸ್ವಲ್ಪ ಹುರಿದು ಅದಕ್ಕೆ ತುಪ್ಪ ಸೇರಿಸಿ ಬೇಯಿಸಬೇಕು. ಇದಕ್ಕೆ ಒಂದು ಗ್ಲಾಸ್ ಹಾಲು, ಸಕ್ಕರೆ, ಡ್ರೈಫ್ರುಟ್ಸ್ (ಬಾದಾಮಿ, ಗೋಡಂಬಿ, ಒಣದ್ರಾಕ್ಷಿ) ತುಪ್ಪದಲ್ಲಿ ಹುರಿದು ಸೇರಿಸಿ ದಿನಾ ಸಂಜೆಯ ಹೊತ್ತಿಗೆ ತಿಂದರೆ ಒಂದು ತಿಂಗಳೊಳಗೆ ದಪ್ಪಗಾಗಬಹುದು