ಮೈಸೂರು, ಡಿ. 29 : ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ಸರ್ಕಾರ ಘೋಷಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿವೆ.
ಹಿಂದಿನ ಒಪ್ಪಂದದಂತೆ ಈ ಬಾರಿ ಮೇಯರ್ ಗಾದಿಯನ್ನು ಜೆಡಿಎಸ್ಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿದೆ. ಹಾಗಾಗಿ ಜೆಡಿಎಸ್ನಲ್ಲಿ ಆಕಾಂಕ್ಷಿಗಳು ತಮ್ಮನ್ನೇ ಮೇಯರ್ ಮಾಡುವಂತೆ ಪಕ್ಷದ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದ್ದು ಜೆಡಿಎಸ್ನಲ್ಲಿ ರೇಷ್ಮಾ ಬಾನು, ನಮ್ರತಾ ರಮೇಶ್, ಕೆ.ನಿರ್ಮಲಾ ಹಾಗೂ ತಸ್ನೀಮ್ ಅವರು ಪಟ್ಟ ಗಿಟ್ಟಿಸಲು ಹವಣಿಸುತ್ತಿದ್ದಾರೆ.