ಮಂಡ್ಯ, ಡಿ. 26: ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಬಳಿ ಅಕ್ರಮ ಮದ್ಯ ಮಾರಾಟದ ಜೊತೆಗೆ ಜೂಜಾಟ ನಡೆಸುತ್ತಿದ್ದ ಎಂಬ ದೂರುಗಳು ಹಲವು ದಿನಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಂದು ಎಎಸ್‍ಪಿ ಕೆ.ಪರಶುರಾಮ್ ಅವರ ಸೂಚನೆ ಮೇರಗೆ ಪೊಲೀಸರು ಕೊಮ್ಮೇರಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಂಡ್ಯದ ನಗರಸಭೆ ಜೆಡಿಎಸ್ ಸದಸ್ಯ ಪೊಲೀಸ ಅತಿಥಿಯಾಗಿದ್ದು, ನಗರದ 12ನೇ ವಾರ್ಡ್‍ನ ನಗರ ಸಭೆಯ ಜೆಡಿಎಸ್ ಸದಸ್ಯ ಆರೋಪಿಯಾಗಿದ್ದಾನೆ
ಪೊಲೀಸ್ ಪರಿಶೀಲನೆ ವೇಳೆ ಅಕ್ರಮ ಮದ್ಯ ಮಾರಟ ಮಾಡುತ್ತಿದ್ದು ಕಂಡುಬಂದಿದೆ. ಸ್ಥಳದಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.