ಇದು ಸೌಜನ್ಯದ ಭೇಟಿಯಷ್ಟೇ: ಸುಮಲತಾ ಅಂಬರೀಶ್

ಇದು ಸೌಜನ್ಯದ ಭೇಟಿಯಷ್ಟೇ: ಸುಮಲತಾ ಅಂಬರೀಶ್

ಬೆಂಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್ : ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿರುವ ಸುಮಲತಾ ಅಂಬರೀಶ್ ಇಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಯ ನಂತರದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ತಮ್ಮ ಮುಂದಿನ ರಾಜಕೀಯ ನಿಲುವಿನ ಕುರಿತಂತೆ ಮಾರ್ಗದರ್ಶನ ಪಡೆಯಲು ತಾವು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದರು.

‘ಎಸ್. ಎಂ ಕೃಷ್ಣ ಅವರು ಮಂಡ್ಯದವರು, ನಮಗೆ ಹತ್ತಿರದವರು ಹಾಗೂ ನಮ್ಮ ಹಿರಿಯರು, ಆದ್ದರಿಂದ ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ, ಇದು ಸೌಜನ್ಯದ ಭೇಟಿಯಷ್ಟೇ’ ಎಂದು ಸ್ಷಷ್ಟನೆ ನೀಡಿದರು.

‘ನಾನು ವ್ಯಕ್ತಿಗತ ಯಾವುದೇ  ವಿಷಯ ಚರ್ಚಿಸುವುದಿಲ್ಲ’ ಎಂದ ಸುಮಲಾತಾ ತಾವು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಮಾರ್ಚ್ 18ರಂದು ತಿಳಿಸುವುದಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos