ಐಟಿ ದಾಳಿಗೂ ನನಗೂ ಸಂಬಂಧವಿಲ್ಲ-ಜಾಲಪ್ಪನ ಮಗ ನರಸಿಂಹಸ್ವಾಮಿ

ಐಟಿ ದಾಳಿಗೂ ನನಗೂ ಸಂಬಂಧವಿಲ್ಲ-ಜಾಲಪ್ಪನ ಮಗ ನರಸಿಂಹಸ್ವಾಮಿ

ದೊಡ್ಡಬಳ್ಳಾಪುರ, ಅ. 11: ಜಾಲಪ್ಪನವರ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅಂತಾ ಜಾಲಪ್ಪನವರ ಎರಡನೇ ಮಗ ಬಿಜೆಪಿಯ ಮಾಜಿ ಶಾಸಕ  ಜೆ.ನರಸಂಹಸ್ವಾಮಿ ತಿಳಿಸಿದ್ದಾರೆ.

ಅವರು ಇಂದು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ ಐಟಿ ದಾಳಿ ಕಾಲೇಜಿನ ಮೇಲೆ ಆಗಿದೆ, ಈ ಬಗ್ಗೆ ಟಿವಿಯಲ್ಲಿ ಬರುತ್ತಿದ್ದನ್ನು ನೋಡಿದೆ. ನನ್ನ ತಮ್ಮ ರಾಜೇಂದ್ರ ಕಾಲೇಜುಗಳಿಗೆ ಹಣಕಾಸು ನಿರ್ದೇಶಕನಾಗಿದ್ದಾನೆ. ಚಿಕ್ಕಬಳ್ಳಾಪುರದ ನಾಗರಾಜು ಕಾಲೇಜಿನ ಕಾರ್ಯದರ್ಶಿಯಾಗಿದ್ದಾರೆ, ನಮ್ಮ ತಂದೆ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಆ ಸಂಸ್ಥೆಗಳಲ್ಲಿ ನನ್ನದೂ ಯಾವುದೇ ಪಾತ್ರವಿಲ್ಲ. ಐಟಿ ದಾಳಿ ಅವರಿಗೆ ಸಂಬಂಧಪಟ್ಟಿದ್ದು, ದಾಳಿಗೂ ನನಗೂ ಸಂಬಂಧವಿಲ್ಲ ಎಂದು ನರಸಿಂಹಸ್ವಾಮಿ ಹೇಳಿದ್ದಾರೆ. ಜತೆಗೆ ಕಾಲೇಜಿನಲ್ಲಿ ನನಗೆ ಯಾವುದೇ ಅಧಿಕಾರ ಕೊಟ್ಟಿಲ್ಲ, ಐಟಿ ದಾಳಿಯಾಗಿದೆ ಇದು ಸರ್ವೆ ಸಮಾನ್ಯವಲ್ಲವೇ ಅಂತಾ ದಾಳಿ ಬಗ್ಗೆ ಸಮರ್ಥನೆಯನ್ನ ಮಾಡಿಕೊಂಡಿದ್ದಾರೆ. ಇನ್ನೂ ಐಟಿಗೆ ಎಲ್ಲಿ ಸಂಶಯವಿರುತ್ತೋ ಅಲ್ಲಿ ದಾಳಿ ಮಾಡ್ತಾರೇ, ಅದನ್ನ ಮಾಡಿಕೊಂಡು ಹೋಗಲಿ. ಕಾಂಗ್ರೆಸ್ ನವರು ರಾಜಕೀಯ ದಾಳಿ ಅಂತಾರೇ, ಇದು ರಾಜಕೀಯ ದಾಳಿಯಲ್ಲ. ನನ್ನ ರಾಜಕೀಯಕ್ಕೆ ಬಿಟ್ಟಿದ್ದು, ರಾಜಕೀಯ ಮಾಡಿಕೊಂಡು ಇದ್ದೇನೆ. ಐಟಿ ಇಲಾಖೆ ಪರಿಶೀಲಿಸಿ ಮಾಡಿರೋ ದಾಳಿ ಅಂತಾ ತಮ್ಮದೇ ತಮ್ಮನ ಮನೆ ಮೇಲಿನ ದಾಳಿಯ ಬಗ್ಗೆ ಬೇಸರವಿಲ್ಲದೆ ನರಸಿಂಹಸ್ವಾಮಿ ಮಾತನಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos