ಬೆಂಗಳೂರು: ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರು ಪ್ರಚೋದನಕಾರಿ ಹೇಳಿಕೆಯನ್ನು ಹೇಳಿರುವುದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನು ಎಫ್ ಐ ಆರ್ ದಾಖಲಾಗಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಬಸವನಗೌಡ ಯತ್ನಾಳ ಅವರು, ತಮ್ಮ ಸೋಶಿಯಲ್ ಖಾತೆಯಲ್ಲಿ ಹಾಕುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹರ ಹಾಕಿದ್ದಾರೆ. ಯಾವುದೇ ಹೆದರಿಸು,ವ ಬೆದರಿಸುವ ಪ್ರಯತ್ನಕ್ಕೆ ನಾನು ಜಗ್ಗುವ ಮಾತೇ ಇಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಹಿಂದೂಗಳ ಉತ್ಸವ, ಆಚರಣೆಗಳನ್ನು ಗುರಿಯಾಗಿಸಿಕೊಂಡು ಶಾಂತಿ ಕದಡುತ್ತಿರುವ ದುಷ್ಟ ಶಕ್ತಿಗಳ ಹೆಡೆಮುರಿಕಟ್ಟಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ಹಿಂದೂಗಳ ಹಕ್ಕುಗಳನ್ನು ಪ್ರತಿಪಾದಿಸಿದ ನಮ್ಮಂತವರ ಮೇಲೆ ಕೇಸು ಹಾಕುತ್ತಿದೆ. ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಕ್ಸ್‌ನಲ್ಲಿ ಏನಿದೆ?
ಮದ್ದೂರಿನಲ್ಲಿ ಮಾಡಿದ ಭಾಷಣಕ್ಕಾಗಿ ನನ್ನ ಮೇಲೆ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಸರ್ಕಾರ ಅದೆಷ್ಟೇ ಎಫ್‌ಐಆರ್‌ಗಳನ್ನು ಹಾಕಿದರೂ ಸಹ ನಾನು ವಿಚಲಿತನಾಗುವುದಿಲ್ಲ. ಗೋಮಾತೆಯ ಕೆಚ್ಚಲನ್ನು ಕತ್ತರಿಸಿದಾಗ, ಗಣೇಶ ವಿಸರ್ಜನೆ ನಡೆಯುತ್ತಿರುವಾಗ ಕಲ್ಲು ತೂರಾಟ ನಡೆಸಿದವರ ಮೇಲೆ, ಮಸೀದಿಯಲ್ಲಿ ಕಲ್ಲು ಶೇಖರಣೆ ಮಾಡಿ ಗಣೇಶನ ಮೆರವಣಿಗೆ ಹೋಗುತ್ತಿರುವಾಗ ಕಲ್ಲು ತೂರಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ. ಇದನ್ನೂ ಓದಿ: ಕಾಂಗ್ರೆಸ್ನವರು ಜಾತಿ ಜನಗಣತಿಯಂತಹ ಸ್ಕೀಮ್ ಹುಡುಕ್ತಾರೆ?: ಸಿ.ಟಿ. ರವಿ
ಹಿಂದೂಗಳ ಉತ್ಸವ, ಆಚರಣೆಗಳನ್ನು ಗುರಿಯಾಗಿಸಿಕೊಂಡು ಶಾಂತಿ ಕದಡುತ್ತಿರುವ ದುಷ್ಟ ಶಕ್ತಿಗಳ ಹೆಡೆಮುರಿಕಟ್ಟಲು ಆಗದ ರಾಜ್ಯ ಸರ್ಕಾರ ಹಿಂದೂಗಳ ಹಕ್ಕುಗಳನ್ನು ಪ್ರತಿಪಾದಿಸಿದ ನಮ್ಮಂತವರ ಮೇಲೆ ಕೇಸು ಹಾಕುತ್ತಿದೆ. ಕಾಂಗ್ರೆಸ್ ಪಕ್ಷದ ಅಂತ್ಯ ಮದ್ದೂರಿನಿಂದಲೇ ಪ್ರಾರಂಭವಾಗಲಿದೆ. ಇದಕ್ಕೆ ಮೊನ್ನೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳೇ ಸಾಕ್ಷಿ. ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ. ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ.