ಹುಬ್ಬಳ್ಳಿಯಲ್ಲಿ ನಿರ್ಮಾಣ‌ ಹಂತದ ಕಟ್ಟಡ ಕುಸಿತ

  • In Crime
  • March 27, 2019
  • 281 Views
ಹುಬ್ಬಳ್ಳಿಯಲ್ಲಿ ನಿರ್ಮಾಣ‌ ಹಂತದ ಕಟ್ಟಡ ಕುಸಿತ

ಹುಬ್ಬಳ್ಳಿ, ಮಾ.27, ನ್ಯೂಸ್ ಎಕ್ಸ್ ಪ್ರೆಸ್: ಧಾರವಾಡ ಕಟ್ಟಡ ದುರಂತ ಪ್ರಕರಣ ಮಾಸುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ನಿರ್ಮಾಣ‌ ಹಂತದ ಕಟ್ಟಡ ಕುಸಿದಿದೆ.

ನಿರ್ಮಾಣ ಹಂತದ ಕಟ್ಟಡದ ಗೋಡೆ ಮನೆಯ ಮೇಲೆ‌ ಬಿದ್ದು ಮನೆಯೊಂದು ಜಖಂಗೊಂಡ ಘಟನೆ ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿ‌ ನಡೆದಿದೆ.

ಮಹ್ಮದ್ ಅಲಿ ಮಕಾಂದಾರ ಎನ್ನುವವರಿಗೆ ಸೇರಿದ ಮನೆಯೇ ಜಖಂಗೊಂಡಿದೆ. ಪಕ್ಕದ ಮನೆಯ ನಿರ್ಮಾಣ ಹಂತದ ಗೋಡೆ ಮಹ್ಮದ್ ಅಲಿಯವರ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇರದಿದಕ್ಕೆ ಭಾರಿ ಅನಾಹುತ ತಪ್ಪಿದೆ.

ಆದ್ರೆ ಮನೆಯಲ್ಲಿ ಮೇಲ್ಛಾವಣಿ ಸೇರಿದಂತೆ ಮನೆಯಲ್ಲಿನ ವಸ್ತುಗಳಿಗೆ ಹಾನಿಯಾಗಿವೆ. ಬಿಲ್ಡರ್ ರಾಜು ಹಿರೇಮಠ ಅವರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಹಾನಿಗೊಳದಗಾದ ಮಹ್ಮದ್ ಅಲಿ ಆರೋಪಿಸಿದ್ದಾರೆ. ಸ್ಥಳಕ್ಕೆ ಕೇಶ್ವಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos