ಹುಬ್ಬಳ್ಳಿ, ಅ. 25 : ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯು ಕ್ರಿಕ್ಕಿಂಗ್ಡಮ್ ಸಹಯೋಗದೊಂದಿಗೆ ಒಳಾಂಗಣ ಕ್ರಿಕೆಟ್ ತರಬೇತಿ ಕ್ರೀಡಾಂಗಣ ಅ. 25ರಂದು ಬೆಳಗ್ಗೆ 11.30ಕ್ಕೆ ವಿದ್ಯಾನಗರದ ಬಿ.ಎಸ್. ಕಲ್ಲೂರ ಲೇಔಟ್ನಲ್ಲಿ ಉದ್ಘಾಟನೆಯಾಗಲಿದ್ದು, ಅಂತಾರಾಷ್ಟ್ರೀಯ ಕ್ರಿಕೆಟಿಗ ರೋಹಿತ್ ಶರ್ಮಾ ಆಗಮಿಸಲಿದ್ದಾರೆ.
ನಂತರ ಕಿರಿಯಾಡ್ ಪ್ರೆಸ್ಟೀಜ್ ಹೋಟೆಲ್ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರೀ ಸಾಧನೆ ಮಾಡಿದ್ದಾರೆ.